ಮೈಸೂರಿನಲ್ಲಿ ಕಣ್ಮನ ಸೆಳೆಯುತ್ತಿರೋ ಬೊಂಬೆ ಮನೆ; ಇಲ್ಲಿದೆ ಝಲಕ್​

Edited By: ಕಿರಣ್ ಹನುಮಂತ್​ ಮಾದಾರ್

Updated on: Oct 07, 2024 | 3:22 PM

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿ ಮೂರು ದಿನಗಳು ಆಗಿದೆ. ಇದುವರೆಗೂ ಹತ್ತು ಹಲವು ಕಾರ್ಯಕ್ರಮಗಳು ಜನಮನಸೂರೆಗೊಂಡವು. ಅದರಂತೆ ಮೈಸೂರಿನಲ್ಲಿ ಬೊಂಬೆ ಮನೆ ಕೂ ಕಣ್ಮನ ಸೆಳೆಯುತ್ತಿದ್ದು, ಸುಮಾರು 25 ಸಾವಿರ ಬೊಂಬೆಗಳನ್ನ ಬಳಸಿಕೊಂಡು ಈ ಬೊಂಬೆ ಮನೆ ನಿರ್ಮಾಣ ಮಾಡಲಾಗಿದೆ ಈ ಕುರಿತು ಒಂದು ಝಲಕ್​ ಇಲ್ಲಿದೆ.

1 / 6
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿ ಮೂರು ದಿನಗಳು ಆಗಿದೆ. ಇದುವರೆಗೂ ಹತ್ತು ಹಲವು ಕಾರ್ಯಕ್ರಮಗಳು ಜನಮನಸೂರೆಗೊಂಡವು. ಅದರಂತೆ ಇಂದು(ಅ.07) ಕೂಡ ಮೈಸೂರಿನಲ್ಲಿ ಬೊಂಬೆ ಮನೆ ಕಣ್ಮನ ಸೆಳೆಯುತ್ತಿದೆ.

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿ ಮೂರು ದಿನಗಳು ಆಗಿದೆ. ಇದುವರೆಗೂ ಹತ್ತು ಹಲವು ಕಾರ್ಯಕ್ರಮಗಳು ಜನಮನಸೂರೆಗೊಂಡವು. ಅದರಂತೆ ಇಂದು(ಅ.07) ಕೂಡ ಮೈಸೂರಿನಲ್ಲಿ ಬೊಂಬೆ ಮನೆ ಕಣ್ಮನ ಸೆಳೆಯುತ್ತಿದೆ.

2 / 6

ವಿಶ್ವ ವಿಖ್ಯಾತ ಮೈಸೂರು ದಸರಾ 2024ಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು, ನವರಾತ್ರಿ ವೇಳೆ ನಾಡಿನೆಲ್ಲೆಡೆ ಮನೆ ಮನೆಗಳಲ್ಲಿ ಬೊಂಬೆ ಕೂರಿಸಿ ಸಂಭ್ರಮಾಚರಣೆ ಇರುತ್ತದೆ. ಅದರಂತೆ ಮೈಸೂರಿನಲ್ಲಿಯೂ ಬೊಂಬೆ ಮನೆ ಕಣ್ಮನ ಸೆಳೆಯುತ್ತಿದ್ದು, ನೋಡುಗರ ಹಿಂಡು ಹರಿದು ಬರುತ್ತಿದೆ.

3 / 6

ಹೌದು, ಮೈಸೂರಿನ ಗಿರಿದರ್ಶಿನಿ ಬಡಾವಣೆಯ ಗೀತಾಶ್ರೀಹರಿ ನಿವಾಸದಲ್ಲಿ ಬೊಂಬೆಗಳು ಜನರನ್ನು ಆಕರ್ಷಿಸುತ್ತಿವೆ. ವಿವಿಧ ಪರಿಕಲ್ಪನೆಗಳನ್ನ ಇಟ್ಟುಕೊಂಡು ಬೊಂಬೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

4 / 6

ಸುಮಾರು 25 ಸಾವಿರ ಬೊಂಬೆಗಳನ್ನ ಬಳಸಿಕೊಂಡು ಈ ಬೊಂಬೆ ಮನೆ ನಿರ್ಮಾಣ ಮಾಡಲಾಗಿದೆ. ಆಶ್ಚರ್ಯವೆಂದರೆ ಇಡೀ ಮನೆ ಬೊಂಬೆಗಳಿಂದಲೇ ಅಲಂಕಾರವಾಗಿದ್ದು, ಜನಮನಸೂರೆಗೊಂಡವು.

5 / 6

ವಿಶೇಷವೆಂದರೆ ಬೊಂಬೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದು, ವಿಷ್ಣುವಿನ ದಶವತಾರ, ಶ್ರೀಕೃಷ್ಣ, ಮಧುರನಗರಿ, ಕೈಲಾಸದಲ್ಲಿ ಶಿವ, ಬೊಂಬೆ ಮೂಲಕ ಸನಾತನ ಧರ್ಮ ಉಳಿಸಿ ಎಂಬ ಸಂದೇಶ ರವಾನಿಸಲಾಗುತ್ತಿದೆ.ಇದರ ಜೊತೆಗೆ ಜಂಬೂ ಸವಾರಿ ಮೆರವಣಿಗೆ, ಖಾಸಗಿ ದರ್ಬಾರ್, ಮಹಾಭಾರತದ ಪಾತ್ರಗಳನ್ನ ಕಟ್ಟಿಕೊಡುವ ಕಾರ್ಯವಾಗುತ್ತಿದೆ.

6 / 6

ಇನ್ನು ಬೊಂಬೆಯಲ್ಲಿಯೇ ಮೂಡಿರುವ ಮದುವೆ ಶಾಸ್ತ್ರ, ಚಾಮುಂಡಿಬೆಟ್ಟ, ಮಲೈ ಮಹದೇಶ್ವರ ಬೆಟ್ಟ ಉಳಿಸಿ ಎಂಬ ಸಂದೇಶ, ನವದುರ್ಗೆಯರು, ಮೈಸೂರು ಸಂಸ್ಥಾನ ಸೇರಿ ನೂರಾರು ಪರಿಕಲ್ಪನೆಗಳನ್ನ ಇಟ್ಟುಕೊಂಡು ಬೊಂಬೆ ಮನೆ ನಿರ್ಮಾಣ ಮಾಡಲಾಗಿದೆ.

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us