
ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿ ಫೇಮಸ್ ಆದವರು ನಮಿತಾ. ಅವರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನಮಿತಾಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಮದುವೆ, ಕುಟುಂಬದಲ್ಲಿ ಬ್ಯುಸಿ ಆದ ಬಳಿಕ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ.

ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಪರ ನಮಿತಾ ಚಿಕ್ಕಪೇಟೆಯಲ್ಲಿ ಪ್ರಚಾರ ಮಾಡಿದ್ದಾರೆ. ‘ಉದಯ್ ಗರುಡಾಚಾರ ಹಾಗೂ ಬಿಜೆಪಿಗೆ ಮತ ಹಾಕಿ’ ಎಂದು ಅವರು ಕೋರಿದ್ದಾರೆ.

2017ರಲ್ಲಿ ವೀರೇಂದ್ರ ಚೌಧರಿ ಅವರನ್ನು ನಮಿತಾ ಮದುವೆ ಆಗಿದ್ದಾರೆ. ಅವರಿಗೆ ಇತ್ತೀಚೆಗೆ ಅವಳಿ ಮಕ್ಕಳು ಜನಿಸಿದೆ. ಕುಟುಂಬದ ಆರೈಕೆಯಲ್ಲೂ ಅವರು ಬ್ಯುಸಿ ಇದ್ದಾರೆ.

ನಮಿತಾ ಅವರು ತೆಲುಗು ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದರು. ‘ನೀಲಕಂಠ’, ‘ಹೂ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.