
ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದವರು ನೇಹಾ ಗೌಡ. ಅವರು ನಟಿಯಾಗಿ, ಮಾಡೆಲ್ ಆಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಈಗ ಖುಷಿ ಸುದ್ದಿ ನೀಡಿದ್ದಾರೆ. ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನೇಹಾ ಹಾಗೂ ಚಂದನ್ ಗೌಡ ವಿವಾಹ ಆಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ಇವರ ಮನೆಗೆ ಹೊಸ ಸದಸ್ಯನ ಆಗಮನ ಆಗಲಿದೆ. ಈ ಬಗ್ಗೆ ಅವರ ಕಡೆಯಿಂದ ಘೋಷಣೆ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಆಗಿದ್ದಾರೆ.

2018ರಲ್ಲಿ ನೇಹಾ ಹಾಗೂ ಚಂದನ್ ಮದುವೆ ಆದರು. ಆರು ವರ್ಷಗಳ ಬಳಿಕ ಇವರ ಕಡೆಯಿಂದ ಗುಡ್ನ್ಯೂಸ್ ಸಿಕ್ಕಿದೆ. ನೇಹಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಬರುತ್ತಿದೆ. ಎಲ್ಲರೂ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.

ಸ್ಕ್ಯಾನಿಂಗ್ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರೋ ನೇಹಾ ‘ನಮ್ಮ ಕುಟುಂಬ ಬೆಳೆಯುತ್ತಿದೆ’ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ನೇಹಾ ಗೌಡ ಅವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ಮಾಡಿದ್ದರು. ನೇಹಾ ಹಾಗೂ ಚಂದನ್ ಅವರು ಹಲವು ರಿಯಾಲಿಟಿ ಶೋಗಳಿಗೆ ಒಟ್ಟಾಗಿ ತೆರಳಿದ್ದಾರೆ.

ನೇಹಾ ಹಾಗೂ ಚಂದನ್ ಬಾಲ್ಯದಿಂದ ಗೆಳೆಯರು. ಬಾಲ್ಯದ ಗೆಳೆಯನನ್ನು ನೇಹಾ ವಿವಾಹ ಆದರು. ಅವರ ಪ್ರೆಗ್ನೆನ್ಸಿ ಬಗ್ಗೆ ಈ ಮೊದಲು ಸಾಕಷ್ಟು ವದಂತಿ ಹಬ್ಬಿದ್ದವು.