IPL 2025: ಆಟಗಾರರ ರಿಟೈನ್ ಬೇಡ, 8 RTM ಕಾರ್ಡ್ ಕೊಡಿ: KKR ಮನವಿ

IPL 2025: ಐಪಿಎಲ್ ಮೆಗಾ ಹರಾಜಿನ ವೇಳೆ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಇಲ್ಲಿ ಮೊದಲ ಆಯ್ಕೆ ಎಂದರೆ ನೇರವಾಗಿ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವುದು. ಎರಡನೇ ಆಯ್ಕೆ ಎಂದರೆ ಆರ್​ಟಿಎಂ. ಅಂದರೆ ತಮಗೆ ಬೇಕಾದ ಹೆಚ್ಚುರಿ ಆಟಗಾರರನ್ನು ಆರ್​ಟಿಎಂ ಆಯ್ಕೆ ಬಳಸಿ ಹರಾಜಿಗೆ ಬಿಡುಗಡೆ ಮಾಡುವುದು. ಆ ಆಟಗಾರರನ್ನು ಹರಾಜಿನಲ್ಲಿ ಇತರೆ ತಂಡ ಖರೀದಿಸಿದರೂ, ಆ ಮೊತ್ತವನ್ನು ಪಾವತಿಸಿ ಬಿಡುಗಡೆ ಮಾಡಿದ ತಂಡವೇ ಮತ್ತೆ ಆಯ್ಕೆ ಮಾಡಿಕೊಳ್ಳಬಹುದು.

|

Updated on: Jun 01, 2024 | 10:52 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಮುಕ್ತಾಯದ ಬೆನ್ನಲ್ಲೇ ಮುಂದಿನ ಆವೃತ್ತಿಯ ಚರ್ಚೆಗಳು ಆರಂಭವಾಗಿದೆ. ಅದರಲ್ಲೂ ಐಪಿಎಲ್ 2025 ಕ್ಕಾಗಿ ಮೆಗಾ ಹರಾಜು ನಡೆಯಲಿದೆ. ಅಂದರೆ ಪ್ರತಿ ತಂಡಗಳು 3 ಅಥವಾ 4 ಆಟಗಾರರನ್ನು ರಿಟೈನ್ ಮಾಡಿ, ಉಳಿದ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ.

1 / 8
ಇದೀಗ ಈ ರಿಟೈನ್ ಪ್ರಕ್ರಿಯೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಏಕೆಂದರೆ ಕೆಲ ಫ್ರಾಂಚೈಸಿಗಳು ಹೆಚ್ಚಿನ ರಿಟೈನ್ ಆಯ್ಕೆ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಇಲ್ಲಿ ಕೆಲ ಫ್ರಾಂಚೈಸಿ ಮಾಲೀಕರು ಒಂದು ತಂಡದಲ್ಲಿ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿಕೊಂಡಿದೆ. ಇದರಿಂದಾಗಿ ತಂಡದ ಅಭಿಮಾನಿಗಳ ಬಳಗ ಸದೃಢವಾಗಲಿದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

2 / 8
ಆದರೆ ಈ ಡಿಮ್ಯಾಂಡ್​ಗೆ ಬಿಸಿಸಿಐ ಇನ್ನೂ ಕೂಡ ಸ್ಪಷ್ಟ ಉತ್ತರ ನೀಡಿಲ್ಲ. ಇದರ ಬೆನ್ನಲ್ಲೇ ಈ ಬಾರಿಯ ರಿಟೈನ್ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರುವಂತೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು ವಿಶೇಷ ಮನವಿ ಸಲ್ಲಿಸಿದ್ದಾರೆ.

3 / 8
ಮೆಗಾ ಹರಾಜಿಗೂ ಮುನ್ನ ಯಾವುದೇ ಆಟಗಾರರನ್ನು ಉಳಿಸಿಕೊಳ್ಳಲು ಆಯ್ಕೆಯನ್ನು ತೆಗೆದು ಹಾಕುವಂತೆ ವೆಂಕಿ ಮೈಸೂರು ಆಗ್ರಹಿಸಿದ್ದಾರೆ. ಅದರ ಬದಲಿಗೆ 8 ರೈಟ್ ಟು ಮ್ಯಾಚ್ (RTM) ಕಾರ್ಡ್​ಗಳ ಆಯ್ಕೆಗಳನ್ನು ನೀಡುವಂತೆ ಕೆಕೆಆರ್ ತಂಡದ ಸಿಇಒ ಆಗ್ರಹಿಸಿದ್ದಾರೆ.

4 / 8
RTM ಎಂದರೆ ಆಟಗಾರರನ್ನು ಆಯ್ಕೆ ಮಾಡಿ ಹರಾಜಿಗೆ ಬಿಡುಗಡೆ ಮಾಡುವುದು. ಉದಾಹರಣೆಗೆ ಕೆಕೆಆರ್ ತಂಡವು ಶ್ರೇಯಸ್ ಅಯ್ಯರ್ ಅವರನ್ನು RTM ನಲ್ಲಿ ಆಯ್ಕೆ ಮಾಡಿದ್ದಾರೆ ಎಂದಿಟ್ಟುಕೊಳ್ಳೋಣ. ಇದಾಗ್ಯೂ ಅಯ್ಯರ್ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೆ ಹರಾಜಿನಲ್ಲಿ ಇತರೆ ತಂಡಗಳು ಬಿಡ್ ಮಾಡಬಹುದು. ಈ ಬಿಡ್ಡಿಂಗ್​ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಯಾವುದಾದರೂ ಫ್ರಾಂಚೈಸಿ 15 ಕೋಟಿ ರೂ.ಗೆ ಖರೀದಿಸಿದರೆ, ಆ ಮೊತ್ತವನ್ನು ನಾವೇ ನೀಡುತ್ತೇವೆ ಎಂದು ಕೆಕೆಆರ್ ತಂಡವೇ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳಬಹುದು.

5 / 8
ಅಂದರೆ ಇಲ್ಲಿ ಆಟಗಾರನಿಗೆ ಗರಿಷ್ಠ ಮೊತ್ತ ಸಿಗುವವರೆಗೂ RTM ಬಳಸಿದ ತಂಡಕ್ಕೆ ಉಳಿಸಿಕೊಳ್ಳುವ ಅವಕಾಶ ಇರುತ್ತದೆ. ಒಂದು ವೇಳೆ ಅಷ್ಟೊಂದು ಮೊತ್ತ ನೀಡಲು ಸಾಧ್ಯವಾಗುವುದಿಲ್ಲ ಎಂದು ಕಂಡು ಬಂದರೆ ಮಾತ್ರ ಹರಾಜಿನಲ್ಲಿ ಬಿಡುಗಡೆ ಮಾಡುತ್ತಾರೆ. ಈ ಮೂಲಕ ಗರಿಷ್ಠ ಮೊತ್ತಕ್ಕೆ ಬಿಡ್ ಮಾಡಿದ ತಂಡಕ್ಕೆ RTM ಬಳಸಲಾದ ಆಟಗಾರರನ್ನು ನೀಡಲಾಗುತ್ತದೆ.

6 / 8
ಹೀಗೆ 8 ಆಟಗಾರರನ್ನು RTM ಮೂಲಕ ಆಯ್ಕೆ ಮಾಡಿ, ಹರಾಜಿನಲ್ಲಿರಿಸಲು ಅವಕಾಶ ನೀಡಬೇಕೆಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು ಮನವಿ ಮಾಡಿದ್ದಾರೆ. ಈ ನಿಯಮ ಜಾರಿಯಾದರೆ, ಕೆಕೆಆರ್ ತಂಡಕ್ಕೆ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇರಲಿದೆ. ಇದೇ ಕಾರಣದಿಂದಾಗಿ ರೈಟ್ ಟು ಮ್ಯಾಚ್ ಕಾರ್ಡ್​ಗೆ ಹೆಚ್ಚಿನ ಅವಕಾಶ ನೀಡುವಂತೆ ಕೆಕೆಆರ್ ಕೋರಿಕೊಂಡಿದೆ.

7 / 8
ಆದರೆ 2018 ರಲ್ಲಿ ನಡೆದ ಮೆಗಾ ಹರಾಜಿನ ವೇಳೆ ಕೇವಲ ಇಬ್ಬರು ಆಟಗಾರರಿಗೆ ಮಾತ್ರ RTM ಕಾರ್ಡ್ ಬಳಸಲು ಅವಕಾಶ ನೀಡಲಾಗಿತ್ತು. ಹಾಗೆಯೇ 2022 ರಲ್ಲಿ ಈ ನಿಯಮವನ್ನು ತೆಗೆದುಹಾಕಲಾಯಿತು. ಇದೀಗ ಮತ್ತೆ ಮೆಗಾ ಹರಾಜು ಬರುತ್ತಿರುವುದರಿಂದ RTM ಕಾರ್ಡ್ ಚರ್ಚೆಗಳು ಶುರುವಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ RTM ಆಯ್ಕೆ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

8 / 8
Follow us
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ

ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ

ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು

‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ

ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್

ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ

ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!

ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!

ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್

ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ