Updated on: Aug 22, 2024 | 8:50 AM
ನೇಹಾ ಗೌಡ ಅವರು ಶೀಘ್ರವೇ ಮುಗಿವಿಗೆ ಜನ್ಮ ನೀಡಲಿದ್ದಾರೆ. ಅವರ ಸೀಮಂತ ಶಾಸ್ತ್ರ ಈಗ ನೆರವೇರಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಆಗಮಿಸಿದ್ದರು.
ನೇಹಾ ಗೌಡ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರನ್ನು ಎಲ್ಲರೂ ಗೊಂಬೆ ಎಂದೇ ಕರೆಯುತ್ತಾರೆ. ಅವರ ಸೀಮಂತ ಶಾಸ್ತ್ರಕ್ಕೆ ತಾರಾ, ಅನುಪಮಾ ಗೌಡ, ಕವಿತಾ ಗೌಡ ಮೊದಲಾದವರು ಆಗಮಿಸಿದ್ದರು.
ನೇಹಾ ಗೌಡ ಅವರ ಸೀಮಂತ ಶಾಸ್ತ್ರದ ಡೆಕೋರೇಷನ್ನ ಚೈತ್ರಾ ವಾಸುದೇವ್ ಅವರೇ ಮಾಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅವರು ಈವೆಂಟ್ ಮ್ಯಾನೇಜ್ಮೆಂಟ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ಮೂಲಕ ನೇಹಾ ಗೌಡ ಫೇಮಸ್ ಆದರು. ಈ ಧಾರಾವಾಹಿಯಲ್ಲಿ ಅವರು ಮಾಡಿದ ಗೊಂಬೆ ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆಯಿತು.
ಚಂದನ್ ಗೌಡ ಹಾಗೂ ನೇಹಾ ಪ್ರೀತಿಸಿ ಮದುವೆ ಆದರು. ಚಂದನ್ ಅವರು ‘ಅಂತರಪಟ’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದಿದ್ದರು.