
ಸ್ಟಾರ್ ನಟಿ ಶ್ರೀದೇವಿ ಪುತ್ರಿಯಾದ ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ನಟನೆಗಿಂತಲೂ ಹೆಚ್ಚಾಗಿ ಗ್ಲಾಮರ್ ಕಡೆಗೆ ಗಮನ ಹರಿಸಿದಂತಿದೆ. ಹಾಟ್ ಆಗಿ ಫೋಟೋಶೂಟ್ ಮಾಡಿಸುವ ಮೂಲಕ ಅವರು ಆಗಾಗ ಸುದ್ದಿ ಆಗುತ್ತಿದ್ದಾರೆ.

ಕೆಲವು ಅಭಿಮಾನಿಗಳು ಜಾನ್ವಿ ಕಪೂರ್ ಅವರ ಈ ಅವತಾರವನ್ನು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಆ ಟೀಕೆಗಳ ಬಗ್ಗೆ ಜಾನ್ವಿ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಫೋಟೋಶೂಟ್ ಮಾಡಿಸುತ್ತ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ನಟಿಯರಿಗೆ ಟ್ರೋಲ್ ಕಾಟ ಸಹಜ ಎಂಬಂತಾಗಿದೆ. ಜಾನ್ವಿ ಕಪೂರ್ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸೌಂದರ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಅವರು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಆ ಬಗ್ಗೆ ಜಾನ್ವಿ ಕಪೂರ್ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕಾದ ಮಾಡೆಲ್ ಕಿಮ್ ಕರ್ದಾಷಿಯಾನ್ ಅವರು ಹಾಟ್ ಡ್ರೆಸ್ಗಳನ್ನು ಧರಿಸುವ ಮೂಲಕ ಫೇಮಸ್ ಆಗಿದ್ದಾರೆ. ಈಗ ನೆಟ್ಟಿಗರು ಜಾನ್ವಿ ಕಪೂರ್ ಅವರನ್ನು ಕಿಮ್ ಕರ್ದಾಷಿಯಾನ್ಗೆ ಹೋಲಿಸುತ್ತಿದ್ದಾರೆ. ‘ಇವರು ಭಾರತದ ಕಿಮ್ ಕರ್ದಾಷಿಯಾನ್’ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಮಗಳು ಎಂಬ ಕಾರಣಕ್ಕೆ ಚಿತ್ರರಂಗದಲ್ಲಿ ಜಾನ್ವಿ ಕಪೂರ್ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತವೆ ಎಂಬ ವಾದ ಇದೆ. ಆ ಕಾರಣದಿಂದಲೂ ಅವರನ್ನು ಕೆಲವರು ಟೀಕೆ ಮಾಡುತ್ತಾರೆ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾನ್ವಿ ಅವರು ಈಗ ‘ಮಿಲಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಜಾನ್ವಿ ಕಪೂರ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 4 ವರ್ಷ ಕಳೆದಿದೆ. ಈ ಸಣ್ಣ ಪಯಣದಲ್ಲೇ ಅವರು ಸೋಲು-ಗೆಲವು ಎರಡನ್ನೂ ಕಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅವರ ಸಹೋದರಿ ಖುಷಿ ಕಪೂರ್ ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ.