ಕಣ್ಣೀರಿನೊಂದಿಗೆ ವಿದಾಯ ಹೇಳಿದ ನೇಮರ್ ಜೂನಿಯರ್!

Updated on: Jul 06, 2026 | 8:25 AM

Neymar jr retirement:  ಬ್ರೆಝಿಲ್‌ನ ಹಳದಿ ಜೆರ್ಸಿಯಲ್ಲಿ ದಂತಕಥೆ ಪೀಲೆ ಅವರ ದಾಖಲೆಯನ್ನೇ ಧೂಳೀಪಟ ಮಾಡಿ, ಇತಿಹಾಸದ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರನಾಗಿ ಮೆರೆದ ಫುಟ್‌ಬಾಲ್ ಲೋಕದ ಅಪ್ರತಿಮ ಮಾಂತ್ರಿಕ ನೇಮರ್ ಜೂನಿಯರ್ ಇಂಟರ್​ನ್ಯಾಷನಲ್ ಕೆರಿಯರ್ ಅಂತ್ಯಗೊಳಿಸಿದ್ದಾರೆ. ಅದು ಸಹ ಕಣ್ಣೀರಿನೊಂದಿಗೆ..!

1 / 5
ಮೈದಾನಕ್ಕಿಳಿದರೆ ಮೈ ನವಿರೇಳಿಸುವ ವೇಗ, ಎದುರಾಳಿ ಡಿಫೆಂಡರ್‌ಗಳನ್ನೇ ದಿಕ್ಕೆಡಿಸುವ ಮಾಂತ್ರಿಕ ಡ್ರಿಬ್ಲಿಂಗ್, ಕಾಲಿನಲ್ಲೇ ಕಾವ್ಯ ಬರೆಯುವ ಬ್ರೆಝಿಲಿಯನ್ ಸಾಂಬಾ ಶೈಲಿಯ ಫುಟ್‌ಬಾಲ್ ಚತುರ ನೇಮರ್ ಜೂನಿಯರ್ (Neymar Jr.)  ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. (PC: Getty images)

2 / 5
2026ರ ಫಿಫಾ ವಿಶ್ವಕಪ್‌ನ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾರ್ವೆ ವಿರುದ್ಧ ಬ್ರೆಝಿಲ್ 2-1 ಅಂತರದಿಂದ ಆಘಾತಕಾರಿ ಸೋಲು ಅನುಭವಿಸಿದ ತಕ್ಷಣವೇ 34 ವರ್ಷದ ನೇಮರ್ ಕಣ್ಣೀರು ಹಾಕುತ್ತಾ ತಮ್ಮ 16 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ಕೆರಿಯರ್‌ಗೆ ವಿದಾಯ ಹೇಳಿದ್ದಾರೆ. (PC: Getty images)

3 / 5
2010 ರಲ್ಲಿ ಅಮೆರಿಕದ ನ್ಯೂಜೆರ್ಸಿಯ 'ಮೆಟ್‌ಲೈಫ್ ಸ್ಟೇಡಿಯಂ'ನಲ್ಲಿ ಅಮೆರಿಕ ವಿರುದ್ಧ ಕಣಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ನೇಮರ್, ಇದೀಗ ಅದೇ ಮೈದಾನದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿ ನಿವೃತ್ತಿ ಪಡೆದಿದ್ದಾರೆ. (PC: Getty images)

4 / 5
ಈ ಬಗ್ಗೆ ಮಾತನಾಡಿದ ನೇಮರ್,  "ನಾನು ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ತುಂಬಾ ಪ್ರಯತ್ನಿಸಿದೆ. ಆದರೆ ವಿಧಿ ಬೇರೆಯದೇ ಇತ್ತು. ಎಲ್ಲಿ ನನ್ನ ಜರ್ನಿ ಆರಂಭವಾಗಿತ್ತೋ, ಇಲ್ಲೇ ಮುಕ್ತಾಯವಾಗಿದೆ" ಎಂದು ಕಣ್ಣೀರು ಹಾಕಿದರು. ಈ ಮೂಲಕ 16 ವರ್ಷಗಳ ಇಂಟರ್​​ನ್ಯಾಷನಲ್ ಕೆರಿಯರ್​ಗೆ ಸಾಂಬಾ ಸುಲ್ತಾನ್ ಗುಡ್ ಬೈ ಹೇಳಿದ್ದಾರೆ. (PC: Getty images)

5 / 5
ನೇಮರ್ ದಾಖಲೆ:  ಬ್ರೆಝಿಲ್ ಫುಟ್‌ಬಾಲ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೀಲೆ (77 ಗೋಲು) ಅವರ ಹೆಸರಲ್ಲಿದ್ದ ಅತಿ ಹೆಚ್ಚು ಗೋಲುಗಳ ದಾಖಲೆಯನ್ನು ನೇಮರ್ ಮುರಿದಿದ್ದಾರೆ. ಅಂತಾರಾಷ್ಟ್ರೀಯ ಕೆರಿಯರ್​ನಲ್ಲಿ ಒಟ್ಟು 130 ಪಂದ್ಯಗಳನ್ನಾಡಿರುವ ನೇಮರ್ 80 ಗೋಲುಗಳನ್ನು ಬಾರಿಸಿ ಬ್ರೆಝಿಲ್​ನ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ಎಂಬ ಹೆಗ್ಗಳಿಕೆಯೊಂದಿಗೆ ಮೈದಾನದಿಂದ ಹೊರನಡೆದಿದ್ದಾರೆ. (PC: Getty images)

Follow Us