
ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬುಧವಾರ (ಮಾ.23) ಆಯೋಜನೆಗೊಂಡಿದ್ದ ಪ್ರೀ-ಆಸ್ಕರ್ ಪಾರ್ಟಿಯಲ್ಲಿ ಅವರು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಭಾಗವಹಿಸುವಾಗ ಅವರು ಧರಿಸಿದ್ದ ಕಪ್ಪು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿದೆ. ಆ ಫೋಟೋಗಳು ವೈರಲ್ ಆಗುತ್ತಿವೆ.

ಅಮೆರಿಕದ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ಹಾಗಂತ ಅವರು ಭಾರತದ ಉಡುಗೆ-ತೊಡುಗೆಯನ್ನು ಮರೆತಿಲ್ಲ. ಸಂದರ್ಭ ಸಿಕ್ಕಾಗಲೆಲ್ಲ ಅವರು ಇಂಡಿಯನ್ ಡ್ರೆಸ್ನಲ್ಲಿ ಕಂಗೊಳಿಸುತ್ತಾರೆ. ಅದಕ್ಕೆ ಈ ಫೋಟೋಗಳು ಸಾಕ್ಷಿ.

ಪ್ರೀ-ಆಸ್ಕರ್ ಪಾರ್ಟಿಯಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಮಾಡಿದ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ. ಜಾಗತಿಕ ಸಿನಿಮಾದಲ್ಲಿ ತಾವು ಗುರುತಿಸಿಕೊಂಡ ಬಗೆಯನ್ನು ಅವರು ವಿವರಿಸಿದ್ದಾರೆ.

