Updated on: Jan 03, 2023 | 8:24 AM
ಕನ್ನಡದ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಅವರಿಗೆ ಇಂದು (ಜನವರಿ 3) ಬರ್ತ್ಡೇ ಸಂಂಭ್ರಮ. ಅವರಿಗೆ ಈಗ 31 ವರ್ಷ ವಯಸ್ಸು. ಪತಿ ಆದಿ ಪಿನಿಶೆಟ್ಟಿ ಜತೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
2022ರ ಮೇ ತಿಂಗಳಲ್ಲಿ ನಿಕ್ಕಿ ಹಾಗೂ ಆದಿ ಪಿನಿಶೆಟ್ಟಿ ಮದುವೆ ಆದರು. ವಿವಾಹದ ಬಳಿಕ ನಿಕ್ಕಿಗೆ ಇದು ಮೊದಲ ವರ್ಷದ ಬರ್ತ್ಡೇ. ಈ ಕಾರಣಕ್ಕೆ ಹುಟ್ಟುಹಬ್ಬದ ಆಚರಣೆ ಜೋರಾಗಿದೆ.
ನಿಕ್ಕಿ ಹಾಗೂ ಆದಿ ಪರಸ್ಪರ ಪ್ರೀತಿಸಿ ಮದುವೆ ಆದರು. ಈ ಜೋಡಿ ಹಾಯಾಗಿ ಜೀವನ ಸಾಗಿಸುತ್ತಿದೆ. ಹೊಸ ವರ್ಷ ಸ್ವಾಗತಿಸಲು ಇವರು ವೆಕೇಶನ್ ತೆರಳಿದ್ದಾರೆ. ಈಗ ಬರ್ತ್ಡೇನೂ ಆಚರಿಸಿಕೊಳ್ಳುತ್ತಿದ್ದಾರೆ.
ನಿಕ್ಕಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಇದನ್ನು ಅವರು ಅಲ್ಲಗಳೆದಿದ್ದರು.
ನಿಕ್ಕಿ ಗಲ್ರಾನಿ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಕನ್ನಡದ ಕೆಲವೇ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.