
‘ಅಣ್ಣಯ್ಯ’ ಧಾರಾವಾಹಿ ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿ ಒಳ್ಳೆಯ ಟಿಆರ್ಪಿ ಪಡೆದುಕೊಂಡಿದೆ. ಅದೇ ರೀತಿ ರಿಷಬ್ ಶೆಟ್ಟಿ ನಿರ್ಮಾಣದ, ಪ್ರಮೋದ್ ಶೆಟ್ಟಿ ನಟನೆಯ ‘ಲಾಫಿಂಗ್ ಬುದ್ಧ’ ಸಿನಿಮಾ ಕೂಡ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಈ ಎರಡೂ ತಂಡಗಳು ಒಂದೆಡೆ ಸೇರಿವೆ. ಇದಕ್ಕೆ ಕಾರಣ ಪ್ರಮೋದ್ ಶೆಟ್ಟಿ ಜನ್ಮದಿನ. ‘ಅಣ್ಣಯ್ಯ’ ಧಾರಾವಾಹಿಯನ್ನು ಪ್ರಮೋದ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಅವರಿಗೆ ನಿರ್ಮಾಣದಲ್ಲಿ ಇದು ಮೊದಲ ಅನುಭವ.

ಪ್ರಮೋದ್ ಅವರಿಗೆ ಕಳೆದ ತಿಂಗಳು ಸಖತ್ ವಿಶೇಷ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ ‘ಲಾಫಿಂಗ್ ಬುದ್ಧ’ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಅದೇ ರೀತಿ ಅವರ ನಿರ್ಮಾಣದ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದು ಎರಡನೇ ಸ್ಥಾನದಲ್ಲಿ ಇದೆ.

‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ರವಿ ಕೃಷ್ಣನ್, ವಿಕಾಸ್ ಉತ್ತಯ್ಯ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯ ಕಥೆ ವೀಕ್ಷಕರಿಗೆ ಇಷ್ಟ ಆಗುತ್ತಿದೆ.

ನಿಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಪ್ರಮೋದ್ ಶೆಟ್ಟಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ.