AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bakrid 2023: ಕೊರೊನಾ ಮಾಯ, ಈ ಬಾರಿ ಬಕ್ರೀದ್ ಬಲು ಜೋರು, ಮೇಕೆಗಳು ಲಕ್ಷ ಲಕ್ಷಕ್ಕೆ ಮಾರಾಟ, ಈ ಐದಾರು ಜಿಲ್ಲೆಗಳಲ್ಲಿ ಸಂಭ್ರಮವೋ ಸಂಭ್ರಮ!

ಕೊರೊನಾ ಆತಂಕ ಮಾಯ, ಈ ಬಾರಿ ಬಕ್ರೀದ್ ಆಚರಣೆ ಬಲು ಜೋರು, ಕೆಲವು ಮೇಕೆಗಳು ಲಕ್ಷ ಲಕ್ಷಕ್ಕೆ ಮಾರಾಟ, ಈ ಐದಾರು ಜಿಲ್ಲೆಗಳಲ್ಲಿ ಸಂಭ್ರಮವೋ ಸಂಭ್ರಮ ಮನೆ ಮಾಡಿದೆ.

ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​|

Updated on: Jun 26, 2023 | 8:19 AM

Share
ತ್ಯಾಗ ಬಲಿದಾನ ಹಾಗೂ ದಾನದ ಸಂಕೇತವೇ ಮುಸ್ಲಿಂ ಬಾಂಧವರು ಆಚರಣೆ ಮಾಡುವ ಬಕ್ರೀದ್. ಇದೇ ಜೂನ್ 29 ರಂದು ಎಲ್ಲೆಡೆ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ವಿಜಯಪುರ ಜಿಲ್ಲೆಯಲ್ಲಿಯೂ ಬಕ್ರೀದ್ ಹಬ್ಬ ಜೋರಾಗಿ ನಡೆಯುತ್ತದೆ. ಹಬ್ಬದ ಪ್ರಯುಕ್ತ  ಮೇಕೆ ಆಡು ಕುರಿಗಳನ್ನು ಬಲಿ ನೀಡುವುದು ಹಬ್ಬದ ವಾಡಿಕೆ. ಕಾರಣ ಬಕ್ರೀದ್ ಹಬ್ಬದ ಬಲಿಗಾಗಿ ಮೇಕೆ ಆಡುಗಳು ಹಾಗೂ ಕುರಿಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹೆಚ್ಚಿದ ದರಕ್ಕೆ ಮಾರಾಟವಾಗುತ್ತಿವೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ...

1 / 9
ಇದೇ ವಾರಾಂತ್ಯದಲ್ಲಿ ಜೂನ್ 29 ರಂದು (ಗುರುವಾರ) ಬಕ್ರೀದ್ ಹಬ್ಬವಿದೆ... ಹಬ್ಬಕ್ಕಾಗಿ ಮೇಕೆ ಆಡು ಕುರಿಗಳ ಮಾರಾಟ ಜೋರಾಗುತ್ತಿದೆ... ವಿಜಯಪುರ ಜಿಲ್ಲೆಯ ಜಾನುವಾರು ಮಾರುಕಟ್ಟೆಗಳು ಭರ್ಜರಿನ ತುಂಬಿತುಳುಕುತ್ತಿವೆ... ಒಂದೊಂದು ಮೇಕೆ  ಲಕ್ಷ- ಒಂದೂವರೆ ಲಕ್ಷ ರೂಪಾಯಿಗೂ ಮಾರಾಟವಾಗುತ್ತಿದೆ... ಹಣೆ ಮೇಲೆ ಚಂದ್ರ ಹಾಗೂ ನಕ್ಷತ್ರವಿದ್ದ ಮೇಕೆ ದರ ಲಕ್ಷಕ್ಕೂ ಆಧಿಕವಾಗಿದೆ... ಎಲ್ಲೆಡೆ ಬಕ್ರೀದ್ ಹಬ್ಬಕ್ಕೆ ತಯಾರಿ ನಡೆದಿದೆ.

2 / 9
ಹಬ್ಬಕ್ಕೆ ಇನ್ನು ಮೂರೇ ದಿನ ಬಾಕಿಯಿದ್ದು, ಹಬ್ಬದ ಪ್ರಯಕ್ತ ಬಲಿದಾನ ಮಾಡಲು ಮೇಕೆ ಆಡು ಹಾಗೂ ಕುರಿಗಳಿಗೆ ಬೇಡಿಕೆ ಹೆಚ್ಚಿದೆ. ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿರೋ ಕಾರಣ ಜಿಲ್ಲೆಯ ಜಾನುವಾರು ಮಾರುಕಟ್ಟೆಗಳಲ್ಲಿ ನಿನ್ನೆ ಭಾನುವಾರ ವ್ಯಾಪಾರ ವಹಿವಾಟು ಜೋರಿದೆ. ಅದರಲ್ಲೂ ಮೇಕೆಗಳು, ಆಡುಗಳು ಹಾಗೂ ಕುರಿಗಳು ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿವೆ.

3 / 9
ವಿಜಯಪುರ ಜಿಲ್ಲೆಯಷ್ಟೇಯಲ್ಲಾ ನೆರೆಯ ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಬೆಳಗಾವಿ, ಮಹಾರಾಷ್ಟ್ರದ ಸೊಲ್ಲಾಪುರ ಸಾಂಗ್ಲಿ ಸೇರಿದಂತೆ ವಿವಿಧ ಭಾಗಗಳಿಂದ ಮೇಕೆ ಆಡು ಕುರಿಗಳನ್ನು ಮಾರಾಟ ಮಾಡಲು ಸಾಕಾಣಿಕೆದಾರರು ಆಗಮಿಸಿದ್ಧಾರೆ. ಉತ್ತಮ ದರಕ್ಕೆ ತಮ್ಮ ಮೇಕೆಗಳು ಮಾರಾಟ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ನಾಮದೇವ ರಾಠೋಡ್, ಧೂಳಖೇಡ ಗ್ರಾಮಸ್ಥ ಸಂತಸ ವ್ಯಕ್ತಪಡಿಸಿದ್ದಾರೆ.

4 / 9
ಬಕ್ರೀದ್ ಹಬ್ಬ ಬಂದರೆ ಸಾಕು ಮೇಕೆ ಆಡುಗಳು ಹಾಗೂ ಕುರಿ ಸಾಕಾಣಿಕೆದಾರರಿಗೆ ಸುಗ್ಗಿಯ ಕಾಲ. ಬಕ್ರೀದ್ ಹಬ್ಬದಲ್ಲಿ ಮಾರಾಟ ಮಾಡಲೆಂದೇ ಕೆಲವರು ಮೇಕೆ ಆಡುಗಳನ್ನು ಸಾಕಾಣಿಕೆ ಮಾಡುತ್ತಾರೆ. ಇವರೆಲ್ಲಾ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ಜಾರುವಾರು ಮಾರುಕಟ್ಟೆಯಲ್ಲಿ ಸಾಕು ಪ್ರಾಣಿಗಳನ್ನು  ಮಾರಾಟ ಮಾಡಲು ತರುತ್ತಾರೆ.

5 / 9
ನಿನ್ನೆ ಭಾನುವಾರ ನಡೆದ ಮಾರುಕಟ್ಟೆಯಲ್ಲಿ ಒಂದು ಮೇಕೆ ಆಡು ಹಾಗೂ ಕುರಿಗೆ ಸರಾಸರಿ 30 ರಿಂದ 35 ಸಾವಿರ ರೂಪಾಯಿಗೆ ದರ ನಿಗದಿಯಾಗಿತ್ತು. ಕನಿಷ್ಟ 30 ಸಾವಿರದಿಂದ ಹಿಡಿದು 1.50 ಲಕ್ಷದವರೆಗೂ ಮೇಕೆ ಆಡುಗಳು ಮಾರಾಟವಾದವು. ಇನ್ನು ಮೇಕೆಯ ತಲೆ ಮೇಲೆ ಚಂದ್ರಾಕೃತಿ ನಕ್ಷತ್ರದ ಆಕೃತಿ ರೀತಿಯ ಗುರುತು ಇದ್ದರೆ ಅದಕ್ಕೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ನಿಗದಿಯಾಗಿತ್ತು.

6 / 9
ಇಂಥ ಮೇಕೆಗಳು 2 ಲಕ್ಷ ರೂಪಾಯಿವರೆಗೂ ಮಾರಾಟವಾದವು. ಕಳೆದ ಬಾರಿಗಿಂತ ಈ ವರ್ಷ ಮೇಕೆ ಆಡು ಕುರಿಗಳ ದರ ಏರಿಕೆಯಾಗಿದೆ. ಹೆಚ್ಚು ಜನರು ಖರೀದಿಗೆ ಬಂದಿದ್ದಾರೆ. ಕೊರೊನಾ ಕಾರಣದಿಂದ ಹಿಂದೆ ಎರಡು ಮೂರು ವರ್ಷ ಹಬ್ಬಗಳು ಸರಿಯಾಗಿ ಮಾಡಿರಲಿಲ್ಲ.

7 / 9
ಈ ಬಾರಿ ಯಾವುದೇ ರೋಗ ಭಯ ಇಲ್ಲದಿರೋ ಕಾರಣ ಬಕ್ರೀದ್ ಹಬ್ಬವನ್ನು ಅದ್ದೂರಿಯಾಗಿ ಮಾಡುತ್ತೇವೆಂದಿದ್ಧಾರೆ. ಜೊತೆಗೆ ಜಾನುವಾರುಗಳ ದರ ಏರಿಕೆ ಬಿಸಿಯೂ ತಾಗಿದೆ ಎಂದಿದ್ದಾರೆ. ಎಪಿಎಂಸಿ ಆಧಿಕಾರಿಗಳ ಪ್ರಕಾರ ಇಂದು 5 ರಿಂದ 6 ಕೋಟಿ ರೂಪಾಯಿಗಳ ವ್ಯಾಪಾರ ವಹಿವಾಟು ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

8 / 9
ಒಟ್ಟಾರೆ ಬಕ್ರೀದ್ ಹಬ್ಬ ಮೇಕೆ ಆಡು ಕುರಿಗಳನ್ನು ಸಾಕಿದವರ ಪಾಲಿಗೆ ಖುಷಿ ನೀಡಿದರೆ ಅವುಗಳನ್ನು ಖರೀದಿ ಮಾಡಿದವರಿಗೆ ದರ ಏರಿಕೆ ಬಿಸಿ ತಾಗಿಸಿದೆ. ದರ ಏರಿಕೆಯ ಮಧ್ಯೆಯೂ ಉತ್ತಮ ವ್ಯಾಪಾರ ವಹಿವಾಟಾಗಿದೆ. ಕೊರೊನಾ ಬಳಿಕ ಜಿಲ್ಲೆಯ ಜನರು ಯಾವುದೇ ಭಯವಿಲ್ಲದೇ ಬಕ್ರೀದ್ ಆಚರಣೆಗೆ ಅಣಿಯಾಗುತ್ತಿದ್ದಾರೆ. ತಮ್ಮ ನೆಂಟರಿಷ್ಟರಿಗೆ ಬಂಧು ಬಳಗಕ್ಕೆ ಬಕ್ರೀದ್ ಔತಣ ಕೂಟಗಳು ಈ ಬಾರಿ ಭರ್ಜರಿಯಾಗೇ ನಡೆಯಲಿವೆ.

9 / 9
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ

Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ

ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್

ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ

ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ

ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ