- Kannada News Photo gallery No Water in Kudalasangama triveni sangam krishna malaprabha ghataprabha river bagalakote
Bagalkot News: ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ; ನೀರಿಲ್ಲದೆ ಬರಿದಾದ ನದಿಗಳು
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.
Updated on:Jun 12, 2023 | 3:50 PM

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ ಕೂಡಲಸಂಗಮ ಸಾಕಷ್ಟು ಪ್ರಸಿದ್ಧಿಯಾದ ಸ್ಥಳವಾಗಿದೆ.

ಈ ಸ್ಥಳದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಮೂರು ನದಿಗಳು ಸಂಗಮವಾಗುತ್ತವೆ.

ಆದರೆ ಈಗ ಈ ಮೂರು ನದಿಗಳ ಸಂಗಮ ಕ್ಷೇತ್ರ ನೀರಿಲ್ಲದೆ ಬಣಗೂಡುತ್ತಿದೆ.

ಅಧಿಕವಾದ ಬಿಸಿಲಿನ ತಾಪಮಾನ ಮತ್ತು ಮುಂಗಾರು ಮಳೆ ವಿಳಂಬವಾದ ಹಿನ್ನೆಲೆ ಜಲಮೂಲ ಖಾಲಿ ಖಾಲಿಯಾಗಿದೆ.

ಮೂರು ನದಿಯಲ್ಲಿ ಬಹುತೇಕ ನೀರು ಖಾಲಿಯಾಗಿದ್ದು, ಜಲಚರಗಳ ಸಾವನ್ನಪ್ಪಿವೆ.

ನೆಲ ಬಿರುಕು ಬಿಟ್ಟಿದ್ದು ಪಕ್ಷಿಗಳು ಅಲ್ಲೋ ಇಲ್ಲೋ ನಿಂತ ನೀರಲ್ಲಿ ಆಹಾರ ಅರಸುತ್ತಿರುವೆ.

ಪುಣ್ಯ ಸ್ನಾನ ಭಾಗ್ಯವಿಲ್ಲದೆ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರು ಬೇಸರಗೊಂಡಿದ್ದಾರೆ.

ದೋಣಿ ವಿಹಾರವಿಲ್ಲದೆ, ಇಟ್ಟಲ್ಲಿಯೇ ತುಕ್ಕು ಹಿಡಿಯುತ್ತಿರುವ ದೋಣಿಗಳು.

ತುಂಬಿ ತುಳುಕುತ್ತಿದ್ದ ತ್ರಿವೇಣಿ ಸಂಗಮ ನೋಡೋದು ಕಣ್ಣಿಗೆ ಹಬ್ಬದಂತಿತ್ತು, ಆದರೆ ಇದೀಗ ಬರಿದಾಗಿ ಭಕ್ತರಿಗೆ ಬೇಸರ ತಂದಿದೆ.

ಬರಿದಾದ ನದಿಯಲ್ಲಿ ದಡಲ್ಲಿ ಮೇಯುತ್ತಿರುವ ದನಕರುಗಳು.
Published On - 3:40 pm, Mon, 12 June 23




