ಕೆನಡಾ ಮೂಲದ ನೋರಾ ಫತೇಹಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಮಾಡೆಲಿಂಗ್, ನೃತ್ಯ, ಹಾಡು, ನಟನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ನೋರಾ.
ಬಾಲಿವುಡ್ನ ‘ರೋರ್: ಟೈಗರ್ ಆಫ್ ಸುಂದರ್ಬನ್ಸ್’ ಮೂಲಕ ನೋರಾ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಇರುವ ನೋರಾಗೆ ಇನ್ಸ್ಟಾಗ್ರಾಂ ಒಂದರಲ್ಲೇ 3.9 ಕೋಟಿ ಅಭಿಮಾನಿಗಳಿದ್ದಾರೆ.
ಮಾಡೆಲಿಂಗ್ನಲ್ಲೂ ಗುರುತಿಸಿಕೊಂಡಿರುವ ನೋರಾ, ಬಗೆಬಗೆಯ ಫ್ಯಾಶನ್ ದಿರಿಸುಗಳ ಮೂಲಕ ಗಮನಸೆಳೆಯುತ್ತಾರೆ.
ನಟಿ ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿವೆ.
ನೋರಾ ಫತೇಹಿ
Published On - 10:04 pm, Sat, 16 April 22