- Kannada News Photo gallery Padma Bhushan awardee and veteran novelist SL Bhyrappa dies, here Is His Personal Life And Books details
ಸಾಹಿತ್ಯ ಲೋಕದ ಮಾಣಿಕ್ಯ,ಕನ್ನಡದ ಸರಸ್ವತಿ ಪುತ್ರ ಭೈರಪ್ಪ ಕಣ್ಮರೆ:ಕಾದಂಬರಿಗಳು ಅಜರಾಮರ
ಎಸ್ ಎಲ್ ಭೈರಪ್ಪ ಅವರು ಕನ್ನಡದ ಖ್ಯಾತ ಸಾಹಿತಿಗಳು. ಅವರಿಗೆ 2023ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ವಯೋಸಹಜ ಕಾಯಿಲೆ ಬಳಲುತ್ತಿದ್ದ ಬೈರಪ್ಪ ಅವರು ಮರುವಿನ ಕಾಯಿಲೆ ಸಹ ಇತ್ತು. ಹೀಗಾಗಿ ಅವರು 3 ತಿಂಗಳಿನಿಂದ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದರು. ಸೆಪ್ಟೆಂಬರ್ 24ರಂದು ಇವರು ಹೃದಯಾಘಾತದಿಂದ ನಮ್ಮೆಲ್ಲರನ್ನು ಅಗಲಿದ್ದಾರೆ.
Updated on: Sep 24, 2025 | 3:58 PM

ಡಾ|| ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಪದ್ಮಭೂಷಣ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರದ ಆಸ್ಪತ್ರೆಯಲ್ಲಿ ಇಂದು(ಸೆಪ್ಟೆಂಬರ್ 24) ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಕಾಯಿಲೆ ಬಳಲುತ್ತಿದ್ದ ಬೈರಪ್ಪ ಅವರು ಮರುವಿನ ಕಾಯಿಲೆ ಸಹ ಇತ್ತು. ಹೀಗಾಗಿ ಅವರು 3 ತಿಂಗಳಿನಿಂದ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದರು.

ಭೀಮಕಾಯ(1952), ಬೆಳಕು ಮೂಡಿತು(1959), ಧರ್ಮಶ್ರೀ – (1961), ದೂರ ಸರಿದರು(1967), ಮತದಾನ (1965), ವಂಶವೃಕ್ಷ(1965), ಜಲಪಾತ (1967), ನಾಯಿ ನೆರಳು (1968), ತಬ್ಬಲಿಯು ನೀನಾದೆ ಮಗನೆ(1968), ಗೃಹಭಂಗ(1970), ನಿರಾಕರಣ-(1971), ಗ್ರಹಣ-(1972), ದಾಟು (1973), ಅನ್ವೇಷಣ(1976), ಪರ್ವ(1979), ನೆಲೆ (1983), ಸಾಕ್ಷಿ (1986) ಅಂಚು-(1990), ತಂತು (1993), ಸಾರ್ಥ(1998), ಮಂದ್ರ(2001), ಆವರಣ(2007), ಕವಲು (2010), ಯಾನ (2014) ಉತ್ತರಕಾಂಡ-(2017).

ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ಭೈರಪ್ಪನವರ ಕಾದಂಬರಿಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಅನೇಕ ಸಾರ್ವಜನಿಕ ಚರ್ಚೆಗಳಿಗೆ ಕಾರಣವಾಗಿವೆ.

94 ವರ್ಷದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಒಬ್ಬ ಪ್ರಸಿದ್ಧ ಕನ್ನಡ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಲೇಖಕರಾಗಿದ್ದು, 2023ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು,




