AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parenting Tips: ಹೆಣ್ಮಕ್ಕಳನ್ನು ಬೆಳೆಸುವಾಗ ಪೋಷಕರು ಮಾಡುವ ತಪ್ಪುಗಳಿವು

ಗಂಡು ಮಗುವಿರಲಿ, ಹೆಣ್ಣು ಮಗುವಿರಲಿ ಆರೋಗ್ಯವಂತ ಮಗು ನಮ್ಮದಾಗಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರು ಹೆಣ್ಣು ಮಗುವೆಂದರೆ ಅಷ್ಟಕಷ್ಟೆ ಎನ್ನುವಂತೆ ನಡೆದುಕೊಳ್ಳುತ್ತಾರೆ. ಮಗಳನ್ನು ಬೆಳೆಸುವಾಗ ತಾರತಮ್ಯವನ್ನು ಮಾಡುತ್ತಾರೆ. ನಿಮಗೇನಾದರೂ ಹೆಣ್ಣು ಮಗುವಿದ್ದರೆ ಆ ಮಗುವನ್ನು ಬೆಳೆಸುವಾಗ ಈ ಕೆಲವು ತಪ್ಪುಗಳನ್ನು ಮಾಡಲೇ ಬಾರದಂತೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 10, 2024 | 6:02 PM

Share
ಮನೆ ಕೆಲಸವನ್ನು ಹೆಣ್ಣೇ ಮಾಡಬೇಕು ಎನ್ನುವುದನ್ನು  ಹೆಣ್ಣು ಮಗುವಿನ ತಲೆಯಲ್ಲಿ ತುಂಬಬೇಡಿ. ಮನೆಯ ಕೆಲಸವನ್ನೆಲ್ಲಾ ಕಲಿಸಿಕೊಡುವುದು ತಂದೆ ತಾಯಿಯರ ಕರ್ತವ್ಯ. ಆದರೆ ಹೆಣ್ಣು ಮಕ್ಕಳಿಗೆ ಮಾತ್ರ ಮನೆ ಕೆಲಸ ಸೀಮಿತ ಎನ್ನುವ ನಿಯಮವನ್ನು ಹೇರಬೇಡಿ.

1 / 5
ಒಂದು ವೇಳೆ ಇಬ್ಬರೂ ಮಕ್ಕಳಿದ್ದು, ಒಂದು ಗಂಡು ಮತ್ತೊಂದು ಹೆಣ್ಣಾಗಿದ್ದರೆ, ಇಬ್ಬರೂ ಮಕ್ಕಳನ್ನು ಬೆಳೆಸುವಾಗ ಬೇಧ ಭಾವ ಮಾಡುವುದು ಸರಿಯಲ್ಲ. ಮಕ್ಕಳಲ್ಲಿ ತಪ್ಪು ಯಾರೇ ಮಾಡಿದರೂ ಗಂಡು ಮಗುವನ್ನೇ ವಹಿಸಿಕೊಂಡು ಮಾತನಾಡುವುದರಿಂದ, ಹೆಣ್ಣು ಮಗುವಿನ ಮನಸ್ಸಿನ ಮೇಲೆ  ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯೂ ಅಧಿಕವಾಗಿರುತ್ತದೆ.

2 / 5
ಹೆಣ್ಣು ಮಕ್ಕಳನ್ನು ಬೆಳೆಸುವಾಗ ನಿರ್ಬಂಧಗಳನ್ನು ಹಾಕಬೇಡಿ. ನಿಮ್ಮ ಮಗಳಿಗೆ ಗಂಡು ಮಕ್ಕಳು ಆಡುವ ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಅದರಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹವನ್ನು ನೀಡಿ. ಒಂದು ವೇಳೆ ಪೋಷಕರಾದ ನೀವುಗಳು ಈ ಕ್ರೀಡೆಗಳನ್ನೇ ಆಡಬೇಕು ಎಂಬ ವಿಷಯಗಳನ್ನು ಹೇಳುತ್ತಾ ಬಂದರೆ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

3 / 5
ಹೆಣ್ಣು ಮಕ್ಕಳನ್ನು ಮುಕ್ತವಾಗಿ ಧ್ವನಿ ಎತ್ತಿ ಮಾತನಾಡಬಾರದು ಎಂದು ತಲೆಯಲ್ಲಿ ತುಂಬಬೇಡಿ. ಏನಾದರೂ ಹೇಳಬೇಕೆಂದುಕೊಂಡಾಗ ಮಗುವನ್ನು ತಡೆದು ಬಾಯಿ ಮುಚ್ಚಿಸುವುದು. ಜೋರಾಗಿ ಮಾತನಾಡಬೇಡ ಎನ್ನುವ ಗದರಿಸುವುದು ಸರಿಯಲ್ಲ.ಇದರಿಂದ ಆ ಮಗುವು ಏನನ್ನು ಹೇಳಲಾಗದೇ ಒಳಗೊಳಗೇ ಕೊರಗಬಹುದು.

4 / 5
ಮಕ್ಕಳನ್ನು ಬೆಳೆಸುವಾಗ ಹೋಲಿಕೆ ಮಾಡಬೇಡಿ. ಬೇರೆ ಮಕ್ಕಳೊಂದಿಗೆ ನಿಮ್ಮ ಮಗಳನ್ನು ಹೋಲಿಸಿ ಚುಚ್ಚಿ ಮಾತನಾಡುವುದು ಸರಿಯಲ್ಲ. ಇದರಿಂದ ನಿಮ್ಮ ಮಗುವಿನಲ್ಲಿ ತಾನು ಹೆಣ್ಣು ತಾನು ಹೇಗಿದ್ದರೂ ತಪ್ಪು ಎನ್ನುವ ಭಾವನೆಯು ಬೆಳೆಯಬಹುದು.

5 / 5
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ