Updated on: Jul 18, 2023 | 1:26 PM
ಪ್ರಿಯಾಂಕಾ ಚೋಪ್ರಾ ಅವರಿಗೆ ಇಂದು (ಜುಲೈ 18) ಜನ್ಮದಿನದ ಸಂಭ್ರಮ. ಸದ್ಯ ಬಾಲಿವುಡ್ನಿಂದ ದೂರವೇ ಇರುವ ಅವರನ್ನು ಯಾರೂ ಮರೆತಿಲ್ಲ. ಆಪ್ತರು, ಕುಟುಂಬದವರು, ಅಭಿಮಾನಿಗಳು ನಟಿಗೆ ವಿಶ್ ತಿಳಿಸುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಸಹೋದರಿಯರು. ಅಕ್ಕನ ಬರ್ತ್ಡೇಗೆ ಪರಿಣೀತಿ ಅವರು ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ.
ಆಪ್ ನಾಯಕ ರಾಘವ್ ಚಡ್ಡಾ ಜೊತೆ ಪರಿಣೀತಿ ಚೋಪ್ರಾ ಎಂಗೇಜ್ಮೆಂಟ್ ನಡೆದಿದೆ. ಈ ಸಮಾರಂಭಕ್ಕೆ ಪ್ರಿಯಾಂಕಾ ಕೂಡ ಬಂದಿದ್ದರು. ಈ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಪರಿಣೀತಿ ಅವರು ಶೇರ್ ಮಾಡಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರಿಗೆ ಈ ವರ್ಷದ ಬರ್ತ್ಡೇ ವಿಶೇಷ ಎನಿಸಿಕೊಂಡಿದೆ. ಪ್ರಿಯಾಂಕಾ-ನಿಕ್ ದಂಪತಿಗೆ ಮಗಳು ಜನಿಸಿದ್ದಾಳೆ. ಅವಳ ಜೊತೆ ಪ್ರಿಯಾಂಕಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾ ಅವರು ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷ ಅವರ ನಟನೆಯ ‘ಸಿಟಾಡೆಲ್’ ಸೀರಿಸ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆದು ಹಲವು ವರ್ಷ ಕಳೆದಿದೆ. ಅವರು ಸದ್ಯಕ್ಕಂತೂ ಬಾಲಿವುಡ್ಗೆ ಮರಳುವುದಿಲ್ಲ.