
ಬಹುಭಾಷಾ ನಟಿ ಪಾರ್ವತಿಗೆ ಇಂದು (ಏ.7) ಜನ್ಮದಿನದ ಸಂಭ್ರಮ. ಮಲಯಾಳಂ ಮೂಲದ ಈ ನಟಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಪಾರ್ವತಿ ಅವರದ್ದು. ಪುನೀತ್ ರಾಜ್ಕುಮಾರ್ ಜತೆ ಎರಡು ಬ್ಲಾಕ್ಬಸ್ಟರ್ ಚಿತ್ರಗಳಾದ ‘ಮಿಲನ’ ಹಾಗೂ ‘ಪೃಥ್ವಿ’ಯಲ್ಲಿ ಪಾರ್ವತಿ ಬಣ್ಣಹಚ್ಚಿದ್ದರು.

‘ಮಳೆ ಬರಲಿ ಮಂಜೂ ಇರಲಿ’, ‘ಅಂದರ್ ಬಾಹರ್’ ಚಿತ್ರಗಳಲ್ಲೂ ಪಾರ್ವತಿ ಬಣ್ಣಹಚ್ಚಿದ್ದರು. ಪ್ರಸ್ತುತ ಮಲಯಾಳಂ ಚಿತ್ರಗಳಲ್ಲಿ ಪಾರ್ವತಿ ಸಕ್ರಿಯರಾಗಿದ್ದಾರೆ.

ಕ್ಯಾಲಿಕಟ್ನಲ್ಲಿ ಜನಿಸಿದ ಪಾರ್ವತಿ, ‘ಎನ್ನು ನಿಂಟೆ ಮೊಯ್ದೀನ್’ ‘ಟೇಕಾಫ್’ ಹಾಗೂ ‘ಚಾರ್ಲಿ’ ಚಿತ್ರಗಳ ನಟನೆಗೆ ‘ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

‘ಟೇಕಾಫ್’ ಚಿತ್ರದಲ್ಲಿನ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಮನ್ನಣೆಯೂ ಪಾರ್ವತಿಗೆ ಲಭ್ಯವಾಗಿದೆ.

2017ರಲ್ಲಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಪಾರ್ವತಿ ‘ಕರೀಬ್ ಕರೀಬ್ ಸಿಂಗಲ್’ ಚಿತ್ರದಲ್ಲಿ ಇರ್ಫಾನ್ ಖಾನ್ ಜತೆ ಕಾಣಿಸಿಕೊಂಡಿದ್ದರು.

ಸಾಮಾಜಿಕ ಕಾರ್ಯಗಳಲ್ಲಿ, ಚಿತ್ರರಂಗದಲ್ಲಿ ಮಹಿಳೆಯರ ಪರ ಧ್ವನಿ ಎತ್ತುವವರಲ್ಲಿ ಪಾರ್ವತಿ ಮುಂಚೂಣಿಯಲ್ಲಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪಾರ್ವತಿ ವಿಭಿನ್ನ ಫೋಟೋಶೂಟ್ಗಳ ಮೂಲಕ ಗಮನಸೆಳೆಯುತ್ತಾರೆ.

ಪಾರ್ವತಿ ಫೋಟೋಗಳು ಇಲ್ಲಿವೆ

ಪಾರ್ವತಿ ಫೋಟೋಗಳು ಇಲ್ಲಿವೆ

ಪಾರ್ವತಿ ಫೋಟೋಗಳು ಇಲ್ಲಿವೆ