ಇನ್ನೇನು ಶ್ರಾವಣ ಮಾಸ ಆರಂಭವಾಗಲಿದೆ. ಆ ಸಂದರ್ಭದಲ್ಲಿ ಶಿವಭಕ್ತರು ವಿಶೇಷವಾಗಿ ಶಿವನನ್ನು ಪೂಜಿಸುತ್ತಾರೆ. ಶಿವ ದೇವಾಲಯಕ್ಕೆ ತೆರಳಿ ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಪ್ರತಿ ಶಿವ ದೇವಾಲಯದ ಗರ್ಭಗುಡಿಯ ಮಧ್ಯದಲ್ಲಿ ಶಿವಲಿಂಗ ಇರುತ್ತದೆ. ಶಿವನ ಎದುರು ನಂದಿ ವಿಗ್ರಹ ಇರುತ್ತದೆ. ಪಾರ್ವತಿ, ಗಣಪತಿ ಅಥವಾ ಕಾರ್ತಿಕೇಯ ಗುಡಿಗಳೂ ದೇವಾಲಯದಲ್ಲಿಇರುತ್ತವೆ. ಆದರೆ ಶಿವನ ಈ ದೇವಾಲಯವು ಜಗತ್ತಿನಲ್ಲೇ ಬಹಳ ವಿಶೇಷವಾಗಿದೆ. ಇಲ್ಲಿ ಶಿವನು ಶಿವಾಲಯದ ಗರ್ಭಗುಡಿಯಲ್ಲಿದ್ದರೆ, ಪಾರ್ವತಿ ದೇವಿಯು ಅವನ ಮುಂದೆ ಅಂದರೆ ಶಿವಾಲಯದ ಬಾಗಿಲಿನ ಬಳಿ ಶಿವನಿಗಾಗಿ ಕಾಯುತ್ತಿರುತ್ತಾಳೆ. ಈ ದೇವಾಲಯವು ಉತ್ತರ ಪ್ರದೇಶದ ವೃಂದಾವನದಲ್ಲಿದೆ.