Pranitha Subhash: ಹೇಗಿತ್ತು ನೋಡಿ ಪ್ರಣಿತಾ ಸುಭಾಷ್ ವಿವಾಹ ವಾರ್ಷಿಕೋತ್ಸವ; ಇಲ್ಲಿವೆ ಫೋಟೋಸ್
ಪ್ರಣಿತಾ ಸುಭಾಷ್ ಅವರು ಥೈಲ್ಯಾಂಡ್ನಲ್ಲಿ ಹಾಯಾಗಿ ಸಮಯ ಕಳೆದಿದ್ದಾರೆ. ಬಾತ್ಟಬ್ನಲ್ಲಿ ಸ್ನಾನ ಮಾಡುತ್ತಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಪತಿ ನಿತಿನ್ ರಾಜು ಜೊತೆ ಪ್ರಣಿತಾ ಅವರು ಡಿನ್ನರ್ ಡೇಟ್ಗೆ ತೆರಳಿದ್ದಾರೆ.
1 / 6
ನಟಿ ಪ್ರಣಿತಾ ಸುಭಾಷ್ ಹಾಗೂ ನಿತಿನ್ ರಾಜು ಅವರು ಮೇ 30ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಕುಟುಂಬ ಸಮೇತ ಥೈಲ್ಯಾಂಡ್ ತೆರಳಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.
2 / 6
ಪ್ರಣಿತಾ ಸುಭಾಷ್ ಅವರು ಥೈಲ್ಯಾಂಡ್ನಲ್ಲಿ ಹಾಯಾಗಿ ಸಮಯ ಕಳೆದಿದ್ದಾರೆ. ಬಾತ್ಟಬ್ನಲ್ಲಿ ಸ್ನಾನ ಮಾಡುತ್ತಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
3 / 6
ಪತಿ ನಿತಿನ್ ರಾಜು ಜೊತೆ ಪ್ರಣಿತಾ ಅವರು ಡಿನ್ನರ್ ಡೇಟ್ಗೆ ತೆರಳಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಕೂಡ ಪ್ರಣಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
4 / 6
ಪ್ರಣಿತಾ ಅವರಿಗೆ ಇದು ಮೂರನೇ ವಿವಾಹ ವಾರ್ಷಿಕೋತ್ಸವ. 2021ರಲ್ಲಿ ಇವರ ವಿವಾಹ ನೆರವೇರಿತು. ಕೊವಿಡ್ ಹಿನ್ನೆಲೆಯಲ್ಲಿ ಸಿಂಪಲ್ ಆಗಿ ಇವರ ವಿವಾಹ ನಡೆದಿತ್ತು.
5 / 6
ಪ್ರಣಿತಾ ಅವರು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಆದರೆ, ಯಾವುದೇ ಹೊಸ ಸಿನಿಮಾಗಳನ್ನು ಇವರು ಘೋಷಣೆ ಮಾಡುತ್ತಿಲ್ಲ. ಅಲ್ಲೊಂದು, ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ.
6 / 6
ಪ್ರಣಿತಾ ಸುಭಾಷ್ ಅವರು ಮಗಳಿ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಆಗಾಗ ಮಗುವಿನ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.