Updated on: Jul 18, 2022 | 8:16 PM
ದೇಶದ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿರುವ ಚುನಾವಣೆಗೆ ಸೋಮವಾರ ಮತದಾನ ನಡೆದಿದೆ
ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ.
727 ಸಂಸದರು ಮತ್ತು 9 ಶಾಸಕರು ಸೇರಿದಂತೆ 736 ಸದಸ್ಯರಿಗೆ ರಾಷ್ಟ್ರಪತಿ ಚುನಾವಣೆಗೆ ಸಂಸತ್ ನಲ್ಲಿ ಮತದಾನ ಮಾಡಲು ಅನುಮತಿ
ಒಟ್ಟು ಶೇ 99.18 ಮತದಾನ ದಾಖಲಾಗಿದೆ
730(721 ಸಂಸದರು, 9 ಶಾಸಕ) ಇಂದು ಮತದಾನ ಮಾಡಿದ್ದಾರೆ
ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮತದಾನ
ದೆಹಲಿಯಲ್ಲಿ ಮತದಾನ ಮಾಡಿದ ರಾಘವ್ ಚಡ್ಡಾ
70 ಸದಸ್ಯರಿರುವ ದೆಹಲಿ ವಿಧಾನಸಭೆಯಲ್ಲಿ 68 ಸದಸ್ಯರು ಮತದಾನ ಮಾಡಿದ್ದಾರೆ
ಹರ್ದೀಪ್ ಸಿಂಗ್ ಪುರಿ ಮತದಾನ
ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
ಮತದಾನ ಮಾಡುತ್ತಿರುವ ಗೋವಿಂದ ಕಾರಜೋಳ
ಮಮತಾ ಬ್ಯಾನರ್ಜಿ ಮತ ಚಲಾವಣೆ
ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಸಂಸದ ಮನಮೋಹನ್ ಸಿಂಗ್ ಸಂಸತ್ ಭವನದಲ್ಲಿ ಮತ ಚಲಾಯಿಸಿದರು
ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡುತ್ತಿರುವುದು
ಪಿಪಿಇ ಕಿಟ್ ಧರಿಸಿ ಬಂದ ನಿರ್ಮಲಾ ಸೀತಾರಾಮನ್
ಒ.ಪನ್ನೀರ್ ಸೆಲ್ವಂ ಮತದಾನ
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಂದ ಮತದಾನ
ಮತದಾನ ಮಾಡುತ್ತಿರುವ ಧರ್ಮೇಂದ್ರ ಪ್ರಧಾನ್
ಸೋನಿಯಾ ಗಾಂಧಿ ಮತದಾನ
ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ ಚಲಾಯಿಸಿದರು