Relationship: ಸಂಬಂಧದೊಳಗೆ ನಾವೇ ಹಾಕಿಕೊಂಡಿರುವ ಗಡಿಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ
TV9kannada Web Team | Edited By: Nayana Rajeev
Updated on: Jul 18, 2022 | 5:00 PM
ಯಾವುದೇ ಸಂಬಂಧದಲ್ಲಾದರೂ ಅದಕ್ಕೆ ಗಡಿ ಎಂಬುದು ಇರಲೇಬೇಕು, ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ.
Jul 18, 2022 | 5:00 PM
ಬೇರೆಯವರ ನಂಬಿಕೆಗಳನ್ನು ಗೌರವಿಸುವುದನ್ನು ನೀವು ಕಲಿಯುತ್ತೀರಿ. ಹಾಗೆಯೇ ಬೇರೆಯವರ ಅಭಿಪ್ರಾಯವನ್ನು ಏಕೆ ಗೌರವಿಸಬೇಕು ಎಂಬುದನ್ನು ಕಲಿಯುತ್ತೀರಿ.
1 / 6
ಸಂಬಂಧದ ಗಡಿ ಎಂಬುದು ನಿಮಗೆ ನಿಮ್ಮ ವೈಯಕ್ತಿಕ ಜಾಗವನ್ನು ನೀಡುತ್ತದೆ, ಇದು ನಿಮ್ಮ ಬಗ್ಗೆ ಮತ್ತು ನಿಮ್ಮ ಸಂಗಾತಿಯ ಬಗ್ಗೆ ಸಮಾನ ಗಮನವನ್ನು ನೀಡಲು ಅನುವು ಮಾಡಿಕೊಡುತ್ತದೆ.
2 / 6
ಸಂಬಂಧದ ಗಡಿಯಲ್ಲಿಯೇ ನಿಂತು ಆಲೋಚಿಸುವ ಮೂಲಕ ಇಬ್ಬರೂ ಉತ್ತಮ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಪರಸ್ಪರ ಮಾತನಾಡುವಾಗ ಮತ್ತೊಬ್ಬರಿಗೆ ನೋವುಂಟುಮಾಡುವ ವಿಷಯಗಳಿಂದ ದೂರವಿರಿ.
3 / 6
ಸಂಬಂಧದಲ್ಲಿನ ಈ ಗಡಿಗಳಿಂದಾಗಿ, ನಾವು ಹೆಚ್ಚಾಗಿ ಧನಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಮತ್ತು ಅದೇ ಸಮಯದಲ್ಲಿ ನಕಾರಾತ್ಮಕ ವಿಷಯಗಳಿಂದ ದೂರವಿರುತ್ತೇವೆ. ಇದರಿಂದಾಗಿ ನಿಮ್ಮ ಸಂಬಂಧ ಉತ್ತಮವಾಗಿದೆ.
4 / 6
ಉತ್ತಮ ಸಂಬಂಧಗಳು: ಸಂಬಂಧದ ಗಡಿಯೊಳಗಿದ್ದರೆ ಭಿನ್ನಾಭಿಪ್ತಾಯವೆಂಬುದು ಇರುವುದಿಲ್ಲ. ಬೇರೆಯವರ ಮೇಲೆ ಯಾರಿಗೂ ನಿಯಂತ್ರಣವಿಲ್ಲ ಮತ್ತು ಇಬ್ಬರೂ ತಮ್ಮ ವೈಯಕ್ತಿಕ ಜಾಗದಲ್ಲಿ ಉಳಿಯುವ ಮೂಲಕ ಸಂಬಂಧವನ್ನು ಮತ್ತಷ್ಟು ಉತ್ತಮವಾಗಿಸಿಕೊಳ್ಳುತ್ತಾರೆ.
5 / 6
ಯಾವುದೇ ಸಂಬಂಧದಲ್ಲಾದರೂ ಅದಕ್ಕೆ ಗಡಿ ಎಂಬುದು ಇರಲೇಬೇಕು, ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಗಡಿಯೊಳಗೇ ನಿಂತು ಆಲೋಚಿಸಿದಾಗ ಕಂಫರ್ಟ್ ಫೀಲ್ ಆಗುತ್ತದೆ.