
ಬಹುಭಾಷೆಯಲ್ಲಿ ನಟಿಸಿ ಫೇಮಸ್ ಆದ ಕಲಾವಿದೆ ಪ್ರಿಯಾಮಣಿ ಅವರು ಇಂದು (ಜೂನ್ 4) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆ ಪ್ರಯುಕ್ತ ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಪ್ರಿಯಾಮಾಣಿ ಕೈಯಲ್ಲಿ ಪ್ರಸ್ತುತ ಹಲವು ಪ್ರಾಜೆಕ್ಟ್ಗಳಿವೆ.

2003ರಿಂದಲೂ ಪ್ರಿಯಾಮಣಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರು ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಅವರಿಗೆ ಸಂದಿವೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ.

ಸಿನಿಮಾ ಮಾತ್ರವಲ್ಲದೇ ವೆಬ್ ಸಿರೀಸ್ ದುನಿಯಾದಲ್ಲೂ ಪ್ರಿಯಾಮಣಿ ಫೇಮಸ್ ಆಗಿದ್ದಾರೆ. ಅವರು ನಟಿಸಿದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ತುಂಬ ಜನಪ್ರಿಯತೆ ಪಡೆದುಕೊಂಡಿತು. ಇದರ 2 ಸೀಸನ್ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಜನಕ್ಕೆ ಇಷ್ಟ ಆಗಿದೆ.

ಕಿರುತೆರೆಯಲ್ಲೂ ಪ್ರಿಯಾಮಣಿ ಅವರಿಗೆ ಹೆಚ್ಚು ಡಿಮ್ಯಾಂಡ್ ಇದೆ. ಅನೇಕ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಅವರು ಕೆಲಸ ಮಾಡಿದ್ದಾರೆ. ಆ ಮೂಲಕವೂ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಕೆಲವು ಕಿರುಚಿತ್ರಗಳಲ್ಲೂ ಪ್ರಿಯಾಮಣಿ ನಟಿಸಿದ್ದಾರೆ.

ಹಲವು ಖ್ಯಾತ ನಿರ್ದೇಶಕರ ಜೊತೆಗೆ ಪ್ರಿಯಾಮಣಿ ಕೆಲಸ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್, ಶಾರುಖ್ ಖಾನ್ ಮುಂತಾದ ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಅವರಿಗೆ ಇದೆ. ಮುಸ್ತಫಾ ರಾಜ್ ಜೊತೆ ಅವರು ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದಾರೆ.
Published On - 8:14 am, Sat, 4 June 22