
ಖ್ಯಾತ ಪಾಪ್ ಗಾಯಕಿ, ನಟಿ ಬಿಯಾನ್ಸೆಯ ಕಾನ್ಸರ್ಟ್ಗೆ ಪ್ರಿಯಾಂಕಾ ಚೋಪ್ರಾ ತನ್ನ ತಾಯಿ ಹಾಗೂ ಗೆಳತಿಯರೊಟ್ಟಿಗೆ ಹೋಗಿದ್ದರು.

ಬಿಯಾನ್ಸೆಯ ಕಾನ್ಸರ್ಟ್ ಎಂಜಾಯ್ ಮಾಡಿರುವ ಪ್ರಿಯಾಂಕಾ ಚೋಪ್ರಾ, ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸ್ವತಃ ಗಾಯಕಿ, ಸಂಗೀತ ಪ್ರೇಮಿ ಹಾಗೂ ಪಾಪ್ ಗಾಯಕ ನಿಕ್ ಜೋನಸ್ನ ಪತ್ನಿ ಆಗಿರುವ ಪ್ರಿಯಾಂಕಾ ಪಾಪ್ ಗಾಯನವನ್ನು, ಗಾಯಕರನ್ನು ಬಹಳ ಇಷ್ಟಪಡುತ್ತಾರೆ.

ಬಿಯಾನ್ಸೆ ಅದ್ಭುತವಾದ ಅತಿಥಿ ಸತ್ಕಾರ ಮಾಡಿದರು ಎಂದಿರುವ ಪ್ರಿಯಾಂಕಾ ಚೋಪ್ರಾ, ಇದೊಂದು ಬಹುಕಾಲ ನೆನಪುಳಿಯುವ ಕಾರ್ಯಕ್ರಮ ಎಂದು ತಮ್ಮ ಪತಿ ನಿಕ್ ಜೊನಸ್ಗೆ ಧನ್ಯವಾದ ಹೇಳಿದ್ದಾರೆ.

ಬಿಯಾನ್ಸೆ ನೈಟ್ನಲ್ಲಿ ಪ್ರಿಯಾಂಕಾ ಹಾಗೂ ಅವರ ಗೆಳತಿಯರು ಹಾಡಿ ಕುಣಿದು ನರ್ತಿಸಿ ಸಖತ್ ಎಂಜಾಯ್ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾರ ಮೆಚ್ಚಿನ ಗಾಯಕಿ, ಫರ್ಪಾರ್ಮರ್ ಬಿಯಾನ್ಸೆ, ಬಿಯಾನ್ಸೆ ಬಗ್ಗೆ ಕೆಲವು ಒಳ್ಳೆಯ ಸಾಲುಗಳನ್ನು ಪ್ರಿಯಾಂಕಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.