
ನಟಿ ಪ್ರಿಯಾಂಕಾ ಚೋಪ್ರಾ ಅವರು ಭಾರತದ ಸಂಸ್ಕೃತಿಯನ್ನು ವಿದೇಶದಲ್ಲೂ ಸಾರುತ್ತಿದ್ದಾರೆ. ಅದ್ದೂರಿಯಾಗಿ ಅವರು ಹೋಳಿ ಆಚರಿಸಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮದುವೆ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರತಿ ವರ್ಷ ಅವರು ಭಾರತದ ಹಬ್ಬಗಳನ್ನು ಲಾಸ್ ಏಂಜಲಿಸ್ನಲ್ಲಿ ಆಚರಿಸುತ್ತಾರೆ. ಈ ಬಾರಿ ಅವರ ಮನೆಯಲ್ಲಿ ಹೋಳಿ ಸಡಗರ ಜೋರಾಗಿತ್ತು.

ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಆಯೋಜಿಸಿದ್ದ ಹೋಳಿ ಪಾರ್ಟಿಗೆ ಸ್ನೇಹಿತರನ್ನು ಆಹ್ವಾನಿಸಲಾಗಿತ್ತು. ನಟಿ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜೇನ್ ಗುಡ್ಎನಫ್ ಕೂಡ ಇದರಲ್ಲಿ ಭಾಗಿ ಆಗಿದ್ದರು. ಅವರ ಫೋಟೋಗಳು ವೈರಲ್ ಆಗಿವೆ.

ಪ್ರಿಯಾಂಕಾ ಚೋಪ್ರಾ ಅವರ ಜೊತೆ ಪತಿ ನಿಕ್ ಜೋನಸ್ ಕೂಡ ಹೋಳಿ ಬಣ್ಣದಲ್ಲಿ ಮಿಂದೆದ್ದಿದ್ದಾರೆ. ಪ್ರಿಯಾಂಕಾ ಆಚರಿಸುವ ಎಲ್ಲ ಹಬ್ಬಗಳಲ್ಲೂ ಅವರು ಖುಷಿಯಿಂದ ಭಾಗವಹಿಸುತ್ತಾರೆ.

ಪ್ರೀತಿ ಜಿಂಟಾ ಮತ್ತು ಜೇನ್ ಗುಡ್ಎನಫ್ ದಂಪತಿಯ ಇಬ್ಬರು ಮಕ್ಕಳು ಕೂಡ ಸಖತ್ ಎಂಜಾಯ್ ಮಾಡಿದ್ದಾರೆ. ಅದರ ವಿಡಿಯೋ ಮತ್ತು ಫೋಟೋಗಳನ್ನು ಪ್ರೀತಿ ಜಿಂಟಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.