
ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿಯ ‘ಏಷ್ಯಾ ಜ್ಯುವೆಲ್ಸ್ ಶೋ 2022’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಇದಕ್ಕೂ ಮುನ್ನ ನಟಿ ಪ್ರಿಯಾಂಕಾ ಉಪೇಂದ್ರ ಅವರು ಸರ ಹಾಕಿ ಮಿಂಚಿದ್ದಾರೆ.

ಆಭರಣ ಮೇಳದಲ್ಲಿ ಅತ್ಯುತ್ತಮ ಆಭರಣ ವಿನ್ಯಾಸಕರನ್ನು ಮತ್ತು ಬ್ರ್ಯಾಂಡ್‌ಗಳನ್ನು ಒಂದೇ ಸೂರಿನಡಿ ವೀಕ್ಷಿಸಲು ಮತ್ತು ಶಾಪಿಂಗ್ ಮಾಡಲು ‘ಏಷ್ಯಾ ಜ್ಯುವೆಲ್ಸ್ ಶೋ 2022’ ವೇದಿಕೆ ಆಗಿದೆ.

ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಏಷ್ಯಾ ಜ್ಯುವೆಲ್ಸ್ ಶೋ ಗಮನ ಸೆಳೆಯುತ್ತಿದೆ. ನಟಿ ಪ್ರಿಯಾಂಕಾ ಉಪೇಂದ್ರ ಅವರು ಸೆಪ್ಟೆಂಬರ್ 30ರಂದು ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.

ಆಭರಣ ಮೇಳದ ಪೂರ್ವಭಾವಿಯಾಗಿ ಹಾಗೂ ನವರಾತ್ರಿ ಪ್ರಯುಕ್ತ ಪ್ರಿಯಾಂಕ ಉಪೇಂದ್ರ ಇಂದು ವಿಶೇಷ ಆಭರಣ ತೊಟ್ಟು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪ್ರಿಯಾಂಕಾ ಉಪೇಂದ್ರ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.