Puneeth Rajkumar Statue: ಬಳ್ಳಾರಿಯಲ್ಲಿ ಲೋಕಾರ್ಪಣೆಗೆ ಸಿದ್ಧವಾದ 23 ಅಡಿ ಎತ್ತರದ ಪುನೀತ್ ರಾಜ್​ಕುಮಾರ್ ಪ್ರತಿಮೆ

| Updated By: ಆಯೇಷಾ ಬಾನು

Updated on: Jan 18, 2023 | 9:17 AM

ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್ ಶಿಲ್ಪಿ ಮತ್ತು ತಂಡದವರು ಪುನೀತ್ ಪುತ್ಥಳಿ ನಿರ್ಮಿಸಿದ್ದಾರೆ. ಜೀವನ್ ಕಲಾ ಸನ್ನಿಧಿಯ ಜೀವನ್ ಮತ್ತು ಅವರ 15 ಜನ ಶಿಲ್ಪಿಗಳು ಶಿವಮೊಗ್ಗ ನಿದಿಗೆ ಬಳಿ ಪ್ರತಿಮೆಯನ್ನು ಮಾಡಿ ಈಗ ಬಳ್ಳಾರಿಗೆ ಕಳಿಸಿದ್ದಾರೆ.

1 / 6
ಅಭಿಮಾನಿಗಳೇ ನಮ್ಮನೆ ದೇವರು ಎಂದು ಹಾಡಿ ಹೊಗಳುತ್ತಿದ್ದ ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ ಅಭಿಮಾನಿಗಳ ಮನಸ್ಸಿನಲ್ಲಿ ದೇವರಾಗಿ ಉಳಿದಿದ್ದಾರೆ. ಅವರ ಅಭಿಮಾನಿಗಳು ತಾವು ಮಾಡುವ ಪ್ರತಿ ಕೆಲಸದಲ್ಲಿಯೂ ಅವರನ್ನು ನೆನೆಯುತ್ತಿದ್ದಾರೆ.

2 / 6
ಪುನಿತ್ ಅಂದ್ರೆ ಬಳ್ಳಾರಿ ಜನರಿಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಅಭಿಮಾನಕ್ಕೆ ಸಾಕ್ಷಿಯಾಗಿ ಗಣಿ ನಾಡಲ್ಲಿ ಬೃಹತ್ ಪುನೀತ್ ಪುತ್ತಳಿ ತಲೆ ಎತ್ತಿದೆ. 23 ಅಡಿ ಎತ್ತರದ ಅತೀ ದೊಡ್ಡ ಪುತ್ತಳಿ ಎನ್ನುವ ಹೆಗ್ಗಳಿಕೆಗೆ ಈ ಪುತ್ತಳಿ ಪಾತ್ರವಾಗಲಿದೆ.

3 / 6
ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಮುಂದೆ ಕಬ್ಬಿಣ ಹಾಗೂ ಫೈಬರ್ ಮಿಶ್ರಣದಲ್ಲಿ ಮೂಡಿ ಬಂದಿರುವ 23 ಅಡಿ ಎತ್ತರದ ಪುತ್ತಳಿ ಸ್ಥಾಪಿಸಲಾಗಿದೆ. ಇದೇ ತಿಂಗಳ 21 ರಂದು ನಡೆಯುವ ಬಳ್ಳಾರಿ ಉತ್ಸವದಂದು ನಡೆಯುವ ಕಾರ್ಯಕ್ರಮದಲ್ಲಿ ಪುತ್ತಳಿ ಲೋಕಾರ್ಪಣೆ ಮಾಡಲಾಗುತ್ತೆ.

4 / 6
ಸತತ ಐದು ತಿಂಗಳು 15 ಜನ ಸೇರಿ ಪುತ್ತಳಿ ತಯಾರಿಸಿದ್ದಾರೆ. 20 ಲಕ್ಷ ವೆಚ್ಚದಲ್ಲಿ ಈ ಪುತ್ತಳಿ ನಿರ್ಮಾಣವಾಗಿದ್ದು ಮೂರು ಸಾವಿರ ಕೆ.ಜಿ ತೂಕ ಹೊಂದಿದೆ. ಬಳ್ಳಾರಿ ಜಿಲ್ಲಾಡಳಿತ ಪುತ್ತಳಿ ಅನಾವರಣಕ್ಕೆ ಸಿದ್ದತೆ ನಡೆಸಿದೆ.

5 / 6
ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್ ಶಿಲ್ಪಿ ಮತ್ತು ತಂಡದವರು ಪುನೀತ್ ಪುತ್ಥಳಿ ನಿರ್ಮಿಸಿದ್ದಾರೆ. ಜೀವನ್ ಕಲಾ ಸನ್ನಿಧಿಯ ಜೀವನ್ ಮತ್ತು ಅವರ 15 ಜನ ಶಿಲ್ಪಿಗಳು ಶಿವಮೊಗ್ಗ ನಿದಿಗೆ ಬಳಿ ಪ್ರತಿಮೆಯನ್ನು ಮಾಡಿ ಈಗ ಬಳ್ಳಾರಿಗೆ ಕಳಿಸಿದ್ದಾರೆ.

ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್ ಶಿಲ್ಪಿ ಮತ್ತು ತಂಡದವರು ಪುನೀತ್ ಪುತ್ಥಳಿ ನಿರ್ಮಿಸಿದ್ದಾರೆ. ಜೀವನ್ ಕಲಾ ಸನ್ನಿಧಿಯ ಜೀವನ್ ಮತ್ತು ಅವರ 15 ಜನ ಶಿಲ್ಪಿಗಳು ಶಿವಮೊಗ್ಗ ನಿದಿಗೆ ಬಳಿ ಪ್ರತಿಮೆಯನ್ನು ಮಾಡಿ ಈಗ ಬಳ್ಳಾರಿಗೆ ಕಳಿಸಿದ್ದಾರೆ.

6 / 6
ಮೊದಲಿಗೆ ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡ್ ನಿರ್ಮಿಸಿಕೊಂಡು ಆನಂತರದಲ್ಲಿ ಪ್ರತಿಮೆ ಮಾಡಲಾಗಿದೆ. ಪ್ರತಿಮೆಯನ್ನು ಸಾಗಿಸಲು 40 ಅಡಿ ಉದ್ದದ ಹಾಗೂ 20 ಚಕ್ರದ ಲಾರಿ ಬಳಸಲಾಗಿತ್ತು. ಬೃಹತ್ ಕ್ರೇನ್‌ಗಳನ್ನು ಬಳಸಿ ಲಾರಿಗೆ ಪ್ರತಿಮೆಯನ್ನ ಇರಿಸಿ ಬಳ್ಳಾರಿಗೆ ತಗೆದುಕೊಂಡು ಬರಲಾಗಿದೆ.

Published On - 9:17 am, Wed, 18 January 23