
‘ಓಲ್ಡ್ ಮಾಂಕ್’ ಸಿನಿಮಾದಲ್ಲಿ ‘ತಲಾತಪಸ್ವಿ’ ರಾಜೇಶ್ ಒಂದು ಪಾತ್ರ ಮಾಡಿದ್ದಾರೆ. ಕಳೆದ ವರ್ಷ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್ ಅತಿಥಿಯಾಗಿ ಆಗಮಿಸಿದ್ದರು.

ಹಿರಿಯ ನಟ ರಾಜೇಶ್ ಅಭಿನಯಿಸಿದ್ದ ಕೊನೇ ಸಿನಿಮಾ ‘ಓಲ್ಡ್ ಮಾಂಕ್’. ಈ ಸಿನಿಮಾ ಬಿಡುಗಡೆ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಅವರು ನಿಧನರಾಗಿದ್ದು ನೋವಿನ ಸಂಗತಿ. ಫೆ.25ರಂದು ಈ ಚಿತ್ರ ರಿಲೀಸ್ ಆಗಲಿದೆ.

ಕನ್ನಡ ಚಿತ್ರರಂಗಕ್ಕೆ ಈ ಸಾಧಕರ ಕೊಡುಗೆ ಅಪಾರ. ಪುನೀತ್ ರಾಜ್ಕುಮಾರ್ ಮತ್ತು ರಾಜೇಶ್ ಅವರು ಹಲವು ದಶಕಗಳ ಕಾಲ ಚಂದನವನಕ್ಕೆ ಕಲಾ ಸೇವೆಯನ್ನು ಸಲ್ಲಿಸಿದ್ದರು. ಇಂದು ಇಬ್ಬರೂ ನಮ್ಮೊಂದಿಗೆ ಇಲ್ಲ.

‘ಓಲ್ಡ್ ಮಾಂಕ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಪುನೀತ್ ರಾಜ್ಕುಮಾರ್ ಅವರು ರಾಜೇಶ್ ಜೊತೆ ಉಭಯಕುಶಲೋಪರಿ ವಿಚಾರಿಸಿದ್ದರು. ಅದೇ ಅವರಿಬ್ಬರ ಕೊನೇ ಭೇಟಿ ಆಗಲಿದೆ ಎಂದು ಯಾರೂ ಊಹಿಸಿರಲಿಲ್ಲ.

ಪುನೀತ್ ರಾಜ್ಕುಮಾರ್ ಅವರು ಚಿತ್ರರಂಗದ ಹಿರಿಯರಿಗೆ ಅಪಾರವಾಗಿ ಗೌರವ ನೀಡುತ್ತಿದ್ದರು. ಅದೇ ರೀತಿ ‘ಕಲಾತಪಸ್ವಿ’ ರಾಜೇಶ್ ಅವರು ಎಲ್ಲರ ಪ್ರೀತಿ ಸಂಪಾದಿಸಿದ್ದರು. ಇಬ್ಬರಿಗೂ ಅಭಿಮಾನಿಗಳು ಈಗ ಶ್ರದ್ಧಾಂಜಲಿ ಕೋರುತ್ತಿದ್ದಾರೆ.

‘ಓಲ್ಡ್ ಮಾಂಕ್’ ಟ್ರೇಲರ್ ರಿಲೀಸ್ ಕಾರ್ಯಕ್ರಮದ ಖುಷಿಯ ಕ್ಷಣಗಳಲ್ಲಿ ಇಡೀ ತಂಡ ಭಾಗಿ ಆಗಿತ್ತು. ಆದರೆ ಸಿನಿಮಾದ ರಿಲೀಸ್ ಸಮಯದಲ್ಲಿ ಪುನೀತ್ ಮತ್ತು ರಾಜೇಶ್ ಅವರು ಇಲ್ಲ ಎಂಬ ಕೊರಗು ತೀವ್ರವಾಗಿ ಕಾಡುತ್ತಿದೆ.