Updated on: Feb 20, 2022 | 8:30 AM
ದೇಹದಲ್ಲಿನ ಅತಿಯಾದ ಕೊಬ್ಬನ್ನು ಕರಗಿಸಲು ಈ ಆಹಾರ ಪದಾರ್ಥಗಳನ್ನು ತಪ್ಪದೇ ಬಳಸಿ .
ಜೀರಿಗೆ, ಕೊತ್ತಂಬರಿಯನ್ನ ಸೇರಿಸಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಸೇವಿಸಿ. ಇದರಿಂದ ದೇಹದಲ್ಲಿನ ಕೊಬ್ಬು ಕರಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬು ಸೇರಿಸಿ ಕುಡಿಯಿರಿ. ಇದು ನಿಮ್ಮ ದೇಹದಲ್ಲಿ ಶೇಖರಣೆಯಾದ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡುತ್ತದೆ.
ಜೇಷ್ಟ ಮದ್ದು ಒಂದು ಉತ್ತಮ ಗಿಡಮೂಲಿಕೆಯಾಗಿದೆ. ದೇಹವನ್ನು ಸುಸ್ಥಿತಿಯಲ್ಲಿಡಲು ಇದು ನೆರವಾಗುತ್ತದೆ.
ಅಮಲಕಿ, ಹರಿತಕಿ ಮತ್ತು ವಿಭಿತಕಿ ಎನ್ನುವ ಗಿಡಮೂಲಕೆಗಳನ್ನ ಸೇರಿಸಿ ತ್ರಿಫಲ ಎನ್ನಲಾಗುತ್ತದೆ. ಇದನ್ನು ಜೇನುತುಪ್ಪದೊಂದಿಗೆ ಸೇವಿಸದರೆ ಆರೋಗ್ಯಕ್ಕೆ ಉತ್ತಮ.
ಶುಂಠಿ ಸಾರ್ವಕಾಲಿಕ ಔಷಧಿಗಳಲ್ಲಿ ಒಂದು. ಶುಂಠಿಯನ್ನು ಟೀ, ಮಜ್ಜಿಗೆ ಹೀಗೆ ವಿವಿಧ ರೀತಿಯಲ್ಲಿ ಬಳಸಬಹುದು. ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ನಿವಾರಿಸುತ್ತದೆ.
ಬೆಳ್ಳುಳ್ಳಿ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಹೀಗಾಗಿ ಬೆಳ್ಳುಳ್ಳಿ ಸೇವನೆ ಉತ್ತಮ .
ಜ್ಯೂಸ್ ಅಥವಾ ಪೌಡರ್ ರೂಪದಲ್ಲಿ ಆಮ್ಲಾವನ್ನು ಬಳಕೆ ಮಾಡಬಹುದು. ಇದರಿಂದ ದೇಹದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ.