
ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ ಪುನೀತ್ ರಾಜ್ಕುಮಾರ್. ಹಾಗಾಗಿ ಅಪ್ಪು ಎಂದರೆ ಅವರ ಇಡೀ ಕುಟುಂಬದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು.

ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅವರ ಅಪಾರ ಅಭಿಮಾನಿ ಬಳಗ ತೀವ್ರ ನೋವಿನಲ್ಲಿದೆ.

ಗಾಜನೂರಿನಲ್ಲಿ ಡಾ. ರಾಜ್ಕುಮಾರ್ ಅವರು ಹುಟ್ಟಿ ಬೆಳೆದ ಮನೆ ಇದೆ. ಅದು ಅಣ್ಣಾವ್ರ ಮಕ್ಕಳ ಫೇವರಿಟ್ ಸ್ಥಳ. ಪುನೀತ್ ಕೂಡ ಅಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು.

ಅಣ್ಣಾವ್ರದ್ದು ಕಲಾವಿದರ ಕುಟುಂಬ. ಡಾ. ರಾಜ್ಕುಮಾರ್ ರೀತಿಯೇ ಅವರ ಪುತ್ರರು ಕೂಡ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ಸಾಧಿಸಬೇಕಾದ್ದು ಬಹಳ ಇರುವಾಗಲೇ ಅಪ್ಪು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.

ಅಮ್ಮನ ಪ್ರೀತಿಯ ಮಗನಾಗಿದ್ದರು ಅಪ್ಪು. ಚಿಕ್ಕ ವಯಸ್ಸಿನಿಂದಲೂ ಪುನೀತ್ ರಾಜ್ಕುಮಾರ್ ಅವರ ನಟನೆಗೆ ಪಾರ್ವತಮ್ಮ ರಾಜ್ಕುಮಾರ್ ಅವರು ಸಖತ್ ಪ್ರೋತ್ಸಾಹ ನೀಡುತ್ತಿದ್ದರು.

ರಾಘವೇಂದ್ರ ರಾಜ್ಕುಮಾರ್ ಅವರು ಅನಾರೋಗ್ಯದ ಬಳಿಕ ಚೇತರಿಸಿಕೊಂಡು ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದ್ದಾಗ ಪುನೀತ್ ರಾಜ್ಕುಮಾರ್ ತುಂಬ ಖುಷಿಪಟ್ಟಿದ್ದರು. ಸಹೋದರನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಆದರೆ ಇಂದು ಅಪ್ಪು ನಮ್ಮೊಂದಿಗಿಲ್ಲ.

ಪಾರ್ವತಮ್ಮ ರಾಜ್ಕುಮಾರ್ ಅವರ ಕುರಿತು ಪುಸ್ತಕ ಬರೆಯಬೇಕು ಎಂದು ಪುನೀತ್ ಆಸೆ ಇಟ್ಟುಕೊಂಡಿದ್ದರು. ಚಿತ್ರರಂಗದಲ್ಲಿ ತಮ್ಮ ತಾಯಿ ಮಾಡಿದ ಸಾಧನೆಗಳನ್ನು ಆ ಪುಸ್ತಕದಲ್ಲಿ ವಿವರಿಸುವುದು ಅವರ ಉದ್ದೇಶವಾಗಿತ್ತು. ಆ ಕೆಲಸವನ್ನೆಲ್ಲ ಬಿಟ್ಟು ಅಪ್ಪು ಬಾರದ ಊರಿಗೆ ಹೋಗಿದ್ದಾರೆ.