
‘ಪುಟ್ಟಗೌರಿ’ ಧಾರಾವಾಹಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ‘ಡ್ಯಾನ್ಸಿಂಗ್ ಚಾಂಪಿಯನ್ ಶೋ’ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದ ಸಾನ್ಯಾ ಇದೀಗ ಬಿಗ್ ಬಾಸ್ಗೆ ಕಾಲಿಟ್ಟಿದ್ದಾರೆ.

ಸಾನ್ಯಾ ಅಯ್ಯರ್ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿದ್ದಾರೆ. ಅವರ ತಂದೆ-ತಾಯಿ, ಚಿಕ್ಕಮ್ಮಂದಿರು ಕೂಡ ಕಲಾವಿದರು. 8ನೇ ತರಗತಿವರೆಗೆ ನಟಿಸಿದ್ದ ಸಾನ್ಯಾ ಅಯ್ಯರ್ ಅವರು ಆಮೇಲೆ ಶಿಕ್ಷಣದತ್ತ ಮುಖ ಮಾಡಿದರು. ಪ್ರಸ್ತುತ ಸಾನ್ಯಾ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.

‘ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ ಪುಟ್ಟಗೌರಿ ಆಗಿ ಮನಗೆದ್ದ ಸಾನ್ಯಾಗೆ ಒಂದಿಷ್ಟು ಶಾರ್ಟ್ ಮೂವಿ, ಆಲ್ಬಂ ಸಾಂಗ್, ಡ್ಯಾನ್ಸ್ ರಿಯಾಲಿಟಿ ಶೋ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು.

‘ಪುಟ್ಟಗೌರಿ ಮದುವೆ’ ಧಾರಾವಾಹಿ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ದಾಖಲೆ ಸೃಷ್ಟಿ ಮಾಡಿತ್ತು. ಬಾಲ್ಯದಲ್ಲಿ ಗೌರಿ ಪಾತ್ರದಲ್ಲಿ ನಟಿ ಸಾನ್ಯಾ ಅಯ್ಯರ್ ಕಾಣಿಸಿಕೊಂಡಿದ್ದರು.

ಸಾನ್ಯಾ ಅಯ್ಯರ್