ರಾಯನ್ ರಾಜ್ ಸರ್ಜಾ ಬರ್ತ್ಡೇ ಪಾರ್ಟಿಗೆ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಆಗಮಿಸಿ ಜ್ಯೂ. ಚಿರುಗೆ ವಿಶ್ ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.
ರಾಯನ್ ರಾಜ್ ಸರ್ಜಾಗೆ ಇದು ಮೊದಲ ವರ್ಷದ ಹುಟ್ಟುಹಬ್ಬ. ಇಡೀ ಮನೆಯನ್ನು ಕಾಡಿನ ಥೀಮ್ನಲ್ಲಿ ಅಲಂಕಾರಗೊಳಿಸಲಾಗಿತ್ತು. ಗಿಡ, ಮರ, ಪ್ರಾಣಿ ಪಕ್ಷಿಗಳ ಪ್ರತಿಕೃತಿಗಳು ಗಮನ ಸೆಳೆದವು. ‘ರಾಯನ್ ಕಿಂಗ್ಡಮ್ಗೆ ಸ್ವಾಗತ’ ಎಂದು ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.
ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ, ಸ್ನೇಹಿತರಾದ ಪ್ರಜ್ವಲ್ ದೇವರಾಜ್, ಪನ್ನಗ ಭರಣ, ರಾಗಿಣಿ ಚಂದ್ರನ್ ಮುಂತಾದವರು ಬರ್ತ್ಡೇ ಪಾರ್ಟಿಯಲ್ಲಿ ಹಾಜರಿ ಹಾಕಿದ್ದರು. ರಾಯನ್ಗೆ ಬಗೆಬಗೆಯ ಉಡುಗೊರೆ ನೀಡಿದರು.
ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ಮಿಂದೆದ್ದಿದ್ದಾರೆ. ‘ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ನಮ್ಮ ಪುಟಾಣಿ ರಾಜಕುಮಾರನಿಗೆ ಈಗ ಒಂದು ವರ್ಷ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಚಿರು ಸ್ನೇಹಿತ ಪನ್ನಗ ಭರಣ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರ ಇತ್ತೀಚೆಗಷ್ಟೇ ಲಾಂಚ್ ಆಗಿದ್ದು, ಅದರಲ್ಲಿ ಮೇಘನಾ ರಾಜ್ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಅವರು ಕಮ್ಬ್ಯಾಕ್ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.