
ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ಸಿನಿಮಾಗಳ ಶೂಟಿಂಗ್ ಬಿಡುವಿನಲ್ಲಿ ಅವರು ಕುಟುಂಬದವರಿಗೆ ಸಮಯ ಮೀಸಲಿಡುತ್ತಾರೆ. ಈಗ ಅವರು ತಾಯಿಯ ಜೊತೆ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಪೂಜಾ ಹೆಗ್ಡೆ ಅವರ ತಾಯಿ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಮ್ಮನ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ಸಮುದ್ರ ತೀರಿದಲ್ಲಿ ಆಚರಿಸಿದ್ದಾರೆ ಪೂಜಾ. ಈ ಬರ್ತ್ಡೇ ಪಾರ್ಟಿಯಲ್ಲಿ ಅವರ ಕುಟುಂಬದವರು ಮಾತ್ರ ಭಾಗಿ ಆಗಿದ್ದರು.

ಸುಂದರ ಸಂಜೆಯಲ್ಲಿ ಬರ್ತ್ಡೇ ಸೆಲೆಬ್ರೇಟ್ ಮಾಡಲಾಗಿದೆ. ತಾಯಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಸಮುದ್ರ ತೀರದಲ್ಲಿ ತಾಯಿಯ ಜನ್ಮದಿನವನ್ನು ಆಚರಿಸಲು ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು. ಅದರ ಸಂಪೂರ್ಣ ಉಸ್ತುವಾರಿಯನ್ನು ಪೂಜಾ ಹೆಗ್ಡೆ ಅವರು ಖುದ್ದಾಗಿ ನೋಡಿಕೊಂಡಿದ್ದಾರೆ.

ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಪೂಜಾ ಬ್ಯುಸಿ ಆಗಿದ್ದಾರೆ. ಸ್ಟಾರ್ ಸಿನಿಮಾ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.