
ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ಇಬ್ಬರೂ ಒಟ್ಟಾಗಿ ನಟಿಸಿದ ಮೊದಲ ಚಿತ್ರ ‘ಮೊಗ್ಗಿನ ಮನಸು’. ವಿಶೇಷ ಎಂದರೆ ಇದು ಇಬ್ಬರಿಗೂ ಮೊದಲ ಚಿತ್ರ. ಈ ಸಿನಿಮಾ ಹಿಟ್ ಆಯಿತು. ಇದರಿಂದ ಯಶ್ ಹಾಗೂ ರಾಧಿಕಾ ಪಂಡಿತ್ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿತು.

ಯಶ್ ಹಾಗೂ ರಾಧಿಕಾ ಪಂಡಿತ್ ನಟನೆಯ ‘ಮೊಗ್ಗಿನ ಮನಸು’ ಚಿತ್ರ ತೆರೆಕಂಡು ಜುಲೈ 18ಕ್ಕೆ 14 ವರ್ಷ. ಈ ವಿಶೇಷ ದಿನದಂದು ರಾಧಿಕಾ ಪಂಡಿತ್ ಅವರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಮೊಗ್ಗಿನ ಮನಸು’ ಶೂಟಿಂಗ್ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಈ ಚಿತ್ರ 14 ವರ್ಷ ಪೂರೈಸಿದೆ ಎಂಬ ಖುಷಿಯನ್ನು ಅವರು ಫ್ಯಾನ್ಸ್ ಜತೆ ಹಂಚಿಕೊಂಡಿದ್ದಾರೆ.

ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ರಾಧಿಕಾ ಪಂಡಿತ್ ನಟನೆಯಿಂದ ದೂರ ಉಳಿದರೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಯಶ್ ಹಾಗೂ ರಾಧಿಕಾ ಪಂಡಿತ್ಗೆ ಇಷ್ಟು ದೊಡ್ಡ ಬೇಡಿಕೆ ಸೃಷ್ಟಿ ಆಗಲು ಅವರಿಗೆ ಸಿಕ್ಕ ಉತ್ತಮ ಆರಂಭ ಕಾರಣ ಎಂಬುದು ಫ್ಯಾನ್ಸ್ ಅಭಿಪ್ರಾಯ.

ಯಶ್ ಅವರು ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಯಶ್ 19ನೇ ಚಿತ್ರ ಯಾವುದು ಎಂಬ ಕುತೂಹಲ ಮೂಡಿದೆ. ಈ ವಿಚಾರದಲ್ಲಿ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.