
‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿರುವ ಯಶ್ ಅವರು ಈಗ ರಕ್ಷಾ ಬಂಧನ ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಅವರ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ ಕಳೆಕಟ್ಟಿದೆ.

ಕುಟುಂಬದವರ ಜೊತೆ ಸೇರಿ ನಟ ಯಶ್ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ಅವರಿಗೆ ಸಹೋದರಿ ನಂದಿನಿ ರಾಖಿ ಕಟ್ಟಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ಯಶ್ ಅವರು ಕುಟುಂಬಕ್ಕೆ ಸಮಯ ನೀಡುತ್ತಾರೆ.

ರಾಧಿಕಾ ಪಂಡಿತ್ ಸಹೋದರ ಗೌರಂಗ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಫೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್, ರಾಖಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಸಹೋದರ ಯಥರ್ವ್ಗೆ ರಾಖಿ ಕಟ್ಟಿದ ಬಳಿಕ ಪುಟಾಣಿ ಆಯ್ರಾ ಪ್ರೀತಿಯ ಮುತ್ತು ನೀಡಿದ್ದಾಳೆ. ಯಶ್-ರಾಧಿಕಾ ಅಭಿಮಾನಿಗಳು ಈ ಫೋಟೋಗಳಲ್ಲಿ ಸಖತ್ ಮೆಚ್ಚುಗೆ ಸೂಚಿಸಿದ್ದಾರೆ.

ಯಶ್-ರಾಧಿಕಾ ದಂಪತಿಯ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ರಾಖಿ ಹಬ್ಬದ ಸಡಗರದಲ್ಲಿ ಮಿಂದೆದ್ದಿದ್ದಾರೆ. ಇಬ್ಬರೂ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.

ನಟನೆಯಿಂದ ಬ್ರೇಕ್ ಪಡೆದುಕೊಂಡಿರುವ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತ ಇರುತ್ತಾರೆ. ಎಲ್ಲ ವಿಶೇಷ ಸಂದರ್ಭದಲ್ಲೂ ಅವರು ಫೋಟೋ ಮತ್ತು ವಿಡಿಯೋ ಶೇರ್ ಮಾಡಿಕೊಳ್ಳುತ್ತಾರೆ.