ಜನ್ಮದಿನದಂದು ರಾಧಿಕಾ ಜೊತೆ ಯಶ್ ಡೇಟ್ ನೈಟ್; ಇಲ್ಲಿವೆ ಸುಂದರ ಫೋಟೋಗಳು
ನಟ ಯಶ್ ಪಾಲಿಗೆ ಜನವರಿ 8 ವಿಶೇಷ. ಅಂದು ಅವರ ಬರ್ತ್ಡೇ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಹಾರತುರಾಯಿಗಳ ಸಹವಾಸಕ್ಕೆ ಹೋಗದೆ ಫ್ಯಾನ್ಸ್ ಸಾಮಾಜಿಕ ಕೆಲಸಗಳ ಮೂಲಕ ಬರ್ತ್ಡೇ ಆಚರಿಸುತ್ತಿದ್ದಾರೆ, ಈ ಮಧ್ಯೆ ಯಶ್ ಅವರ ಬರ್ತ್ಡೇನ ಆಪ್ತರ ಜೊತೆ ಆಚರಿಸಿಕೊಂಡಿದ್ದಾರೆ.
1 / 5
ನಟ ಯಶ್ ಅವರ ಜನ್ಮದಿನದ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಅವರು ಕೂಡ ಪತಿಯ ಜೊತೆಗೆ ಇದ್ದರು. ಆ ಸಂದರ್ಭ ಹೇಗಿತ್ತು ಎಂಬುದರ ಫೋಟೋಗಳನ್ನು ರಾಧಿಕಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2 / 5
ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಹಾಯಾಗಿ ಸಮಯ ಕಳೆದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
3 / 5
ಗೋವಾದಲ್ಲಿ ಯಶ್ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಕುಟುಂಬದವರು ಹಾಗೂ ಸಿನಿಮಾ ಟೀಂ ಜೊತೆಯಲ್ಲಿ ರಾಧಿಕಾ ಪಂಡಿತ್ ಪತಿಯ ಜನ್ಮದಿನಾಚರಣೆ ಆಚರಿಸಿದ್ದಾರೆ. ಬೀಚ್ ಪಕ್ಕ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
4 / 5
ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿ ಅನೇಕರಿಗೆ ಮಾದರಿ. ಅವರ ಫೋಟೋಗೆ ಫ್ಯಾನ್ಸ್ ನಾನಾ ರೀತಿ ಕಮೆಂಟ್ ಮಾಡುತ್ತಾ ಇದ್ದಾರೆ. ಇದ್ದರೆ ಈ ರೀತಿ ಇರಬೇಕು ಎಂದು ಅನೇಕರು ಹೇಳಿಕೊಂಡಿದ್ದಾರೆ. ಈ ಜೋಡಿ ಅನೇಕರಿಗೆ ಇಷ್ಟ ಆಗಿದೆ.
5 / 5
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇಡೀ ತಂಡ ಗೋವಾದಲ್ಲಿ ಸೆಟಲ್ ಆಗಿದೆ. ಬರ್ತ್ಡೇ ಪ್ರಯುಕ್ತ ಯಶ್ ಅವರ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.
Published On - 12:09 pm, Thu, 9 January 25