
ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಈಗ ಅವರು ಕುಟುಂಬದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಯಶ್ ಜೊತೆ ಅವರು ಆಗಾಗ ಟ್ರಿಪ್ ತೆರಳುತ್ತಾರೆ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

ವಿದೇಶದಲ್ಲಿರುವ ಫೋಟೋನ ರಾಧಿಕಾ ಪಂಡಿತ್ ಭಾನುವಾರ (ಮಾರ್ಚ್ 19) ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ‘ಯಾವಾಗಲೂ ನಗುತ್ತಿರಿ ಮತ್ತು ನೀವಾಗಿರಿ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.

ಅಂದಹಾಗೆ ರಾಧಿಕಾ ಪಂಡಿತ್ ಸದ್ಯ ವಿದೇಶದಲ್ಲಿಲ್ಲ. ಇದು ಅವರ ಬರ್ತ್ಡೇ ಸಂದರ್ಭದಲ್ಲಿ ತೆಗೆದ ಫೋಟೋ ಎನ್ನಲಾಗುತ್ತಿದೆ. ರಾಧಿಕಾ ಹುಟ್ಟುಹಬ್ಬ ಆಚರಣೆಗೆ ವಿದೇಶಕ್ಕೆ ತೆರಳಿದ್ದರು. ಈಗ ಆ ಫೋಟೋನ ಹಂಚಿಕೊಂಡಿದ್ದಾರೆ.

ಪ್ರತಿ ಭಾನುವಾರ ಅಭಿಮಾನಿಗಳಿಗೋಸ್ಕರ ರಾಧಿಕಾ ಪಂಡಿತ್ ಫೋಟೋ ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಬಯಸುತ್ತಾರೆ. ಈಗ ಅವರು ವಿದೇಶದಲ್ಲಿದ್ದ ಫೋಟೋ ಹಂಚಿಕೊಂಡಿದ್ದಕ್ಕೂ ಇದೇ ಕಾರಣ.

ರಾಧಿಕಾ ಪಂಡಿತ್ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಅನ್ನೋದು ಅನೇಕರ ಕೋರಿಕೆ. ಆದರೆ, ಈ ಕೋರಿಕೆ ಈಡೇರಿಲ್ಲ.