- Kannada News Photo gallery Cricket photos India Team 10 Wickets Defeats in 4 times in 4 years see the full details in kannada
IND vs AUS: 4 ವರ್ಷಗಳಲ್ಲಿ 4 ಬಾರಿ; ಟೀಂ ಇಂಡಿಯಾಕ್ಕೆ ಮುಜುಗರ ತಂದ 4 ಹೀನಾಯ ಸೋಲುಗಳಿವು
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಕಳೆದ 4 ವರ್ಷಗಳಲ್ಲಿ 4ನೇ ಬಾರಿಗೆ 10 ವಿಕೆಟ್‌ಗಳಿಂದ ಸೋತ ಕೆಟ್ಟ ದಾಖಲೆಗೆ ಭಾರತ ತಂಡ ಕೊರಳೊಡ್ಡಿದೆ.
Updated on: Mar 20, 2023 | 11:16 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಕಳೆದ 4 ವರ್ಷಗಳಲ್ಲಿ 4ನೇ ಬಾರಿಗೆ 10 ವಿಕೆಟ್‌ಗಳಿಂದ ಸೋತ ಕೆಟ್ಟ ದಾಖಲೆಗೆ ಭಾರತ ತಂಡ ಕೊರಳೊಡ್ಡಿದೆ.

ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 117 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ಸಾಧಿಸಿ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಇದರೊಂದಿಗೆ ಟೀಂ ಇಂಡಿಯಾ 4ನೇ ಬಾರಿಗೆ ಇಂತಹ ಮುಜುಗರಕ್ಕೆ ಒಳಗಾಗಬೇಕಾಯಿತು.

ಅದಕ್ಕೂ ಒಂದು ವರ್ಷದ ಹಿಂದೆ ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ದುಬೈನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ನೀಡಿದ್ದ 152 ರನ್‌ಗಳ ಗುರಿಯನ್ನು ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ ಸಾಧಿಸಿತ್ತು.

ಇನ್ನು 14 ಜನವರಿ 2020 ರಂದು ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲ್ಲಿ ಇದೇ ಆಸ್ಟ್ರೇಲಿಯಾ ತಂಡ ಭಾರತಕ್ಕೆ 10 ವಿಕೆಟ್ಗಳ ಸೋಲಿನ ಶಾಖ್ ನೀಡಿತ್ತು. ಈ ಪಂದ್ಯದಲ್ಲಿ ಭಾರತ ನೀಡಿದ 225 ರನ್‌ಗಳ ಗುರಿಯನ್ನು ಡೇವಿಡ್ ವಾರ್ನರ್ ಮತ್ತು ಆರೋನ್ ಫಿಂಚ್ ಅಜೇಯ ಶತಕ ಬಾರಿಸಿ ಸಾಧಿಸಿದ್ದರು.

ಹಾಗೆಯೇ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿಯೂ ಭಾರತ ಇಂತಹ ಸೋಲಿಗೆ ತುತ್ತಾಗಬೇಕಾಯಿತು. ಆ ಪಂದ್ಯದಲ್ಲಿ ಭಾರತ ನೀಡಿದ 168 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ಗಳಲ್ಲಿಯೇ ಸಾಧಿಸಿತ್ತು.




