
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರತಂಡ ಸದ್ಯ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಶನಿವಾರದಂದು ಚಿತ್ರತಂಡ ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಿ-ರಿಲೀಸ್ ಈವೆಂಟ್ನಲ್ಲಿ ಭಾಗಿಯಾಗಿತ್ತು. ಇಂದು (ಭಾನುವಾರ) ಗುಜರಾತ್ಗೆ ತೆರಳಿದೆ.

ಗುಜರಾತ್ನ ಕೇವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ಗೆ ಚಿತ್ರತಂಡ ಭೇಟಿ ನೀಡಿದೆ. ಈ ಸಂದರ್ಭದ ಚಿತ್ರಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ಏಕತಾ ಪ್ರತಿಮೆಯ ಮುಂಭಾಗದಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ‘ದೋಸ್ತಿ’ ಪೋಸ್ ನೀಡಿರುವುದು. ‘ದೋಸ್ತಿ ಹಾಡು ಈಗಾಗಲೇ ಸೂಪರ್ ಹಿಟ್ ಆಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಸರ್ದಾರ್ ವಲ್ಲಭಭಾಯಿ ಪ್ರತಿಮೆಯ ಮುಂಭಾಗದಲ್ಲಿ ನಿರ್ದೇಶಕ ರಾಜಮೌಳಿಯವರೊಂದಿಗೆ ನಾಯಕ ನಟರಾದ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್.

ಏಕತಾ ಪ್ರತಿಮೆಯನ್ನು ಚಿತ್ರದ ಪ್ರಚಾರದ ಸಂದರ್ಭದಲ್ಲಿ ದರ್ಶಿಸಿದ ಮೊದಲ ಚಿತ್ರತಂಡ ‘ಆರ್ಆರ್ಆರ್’ ಆಗಿದೆ.

ಆಲಿಯಾ ಭಟ್, ಶ್ರಿಯಾ ಶರಣ್, ಅಜಯ್ ದೇವಗನ್ ಮೊದಲಾದ ಖ್ಯಾತ ತಾರೆಯರು ‘ಆರ್ಆರ್ಆರ್’ ಚಿತ್ರದಲ್ಲಿ ನಟಿಸಿದ್ದಾರೆ.

ಮಾರ್ಚ್ 25ರಂದು ‘ಆರ್ಆರ್ಆರ್’ ವಿಶ್ವಾದ್ಯಂತ ರಿಲೀಸ್ ಆಗಲಿದೆ.