ನಟಿ ರಾಕುಲ್ ಪ್ರೀತ್ ಸಿಂಗ್ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ವಿದೇಶದಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಮಾಡಿರೋ ಒಂದು ಸಾಹಸ ಎಲ್ಲರ ಗಮನ ಸೆಳೆದಿದೆ.
ರಾಕುಲ್ ಪ್ರೀತ್ ಸಿಂಗ್ ಅವರು ಮೈನಸ್ 15 ಡಿಗ್ರಿ ಸೆಲ್ಸಿಯಸ್ ಇರುವ ನೀರಿನಲ್ಲಿ ಮುಳುಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಕಿನಿ ಧರಿಸಿದ್ದರು ಅನ್ನೋದು ವಿಶೇಷ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಎಲ್ಲರೂ ದಪ್ಪನೆಯ ಬಟ್ಟೆ ಹಾಕಿ ನಿಂತಿದ್ದರೆ ರಾಕುಲ್ ಮಾತ್ರ ತುಂಡು ಬಟ್ಟೆ ಹಾಕಿ ಐಸ್ ನೀರಲ್ಲಿ ಮುಳುಗೆದ್ದಿದ್ದರು.
ಈ ವಿಡಿಯೋಗೆ ಎಲ್ಲರೂ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ರಾಕುಲ್ ಸಾಹಸವನ್ನು ಕೊಂಡಾಡಿದರೆ ಇನ್ನೂ ಕೆಲವರು ರಾಕುಲ್ ಹಾಟ್ನೆಸ್ ಮೆಚ್ಚಿಕೊಂಡಿದ್ದಾರೆ.
‘ರಾಕುಲ್ ಪ್ರೀತ್ ಸಿಂಗ್ ಮುಳುಗೆದ್ದ ಬಳಿಕ ನೀರು ಬಿಸಿಯಾಗಿದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ರಾಕುಲ್ ಹಾಟ್ ಆಗಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ’ ಎಂದು ಬರೆದುಕೊಂಡಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ.
Published On - 6:30 am, Sun, 7 May 23