
ಪಾರ್ಟಿಗೆ ನಟ ಜೂ ಎನ್ಟಿಆರ್, ವೆಂಕಟೇಶ್, ಮಹೇಶ್ ಬಾಬು ಇನ್ನೂ ಹಲವರು ಆಗಮಿಸಿದ್ದರು, ಜೊತೆಗೆ ಅವರ ಪತ್ನಿಯರು ಸಹ ಆಗಮಿಸಿದ್ದರು.

ಎಸ್ಎಸ್ ರಾಜಮೌಳಿ ಕುಟುಂಬ, ಅಲ್ಲು ಅರ್ಜುನ್ ಕುಟುಂಬ, ವೆಂಕಟೇಶ್ ದಗ್ಗುಬಾಟಿ ಕುಟುಂಬ, ನಾಗಾರ್ಜುನ ಕುಟುಂಬ ಇನ್ನೂ ಹಲವರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್, ಪಾರ್ಟಿಯ ಹಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷವಾಗಿ ಸ್ಟಾರ್ ನಟರ ಪತ್ನಿಯರ ಗ್ಯಾಂಗ್ನ ಚಿತ್ರವನ್ನು ನಮ್ರತಾ ಶಿರೋಡ್ಕರ್ ಹಂಚಿಕೊಂಡಿದ್ದಾರೆ.

ಸ್ಟಾರ್ ನಟರುಗಳು ಮಾತ್ರವೇ ಅಲ್ಲದೆ ಕೆಲವು ನಿರ್ಮಾಪಕರು, ಸಂಗೀತ ನಿರ್ದೇಶಕರ ಕುಟುಂಬಗಳು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದವು.

ರಾಮ್ ಚರಣ್-ಉಪಾಸನಾ ಆಗಾಗ್ಗೆ ಹೀಗೆ ಸ್ನೇಹಿತರನ್ನು ಆಹ್ವಾನಿಸಿ ಪಾರ್ಟಿ ನೀಡುತ್ತಿರುತ್ತಾರೆ.

ರಾಮ್ ಚರಣ್ ಹಾಗೂ ಉಪಾಸನಾ ಕಮ್ಮಿನೇನಿ ಅವರುಗಳು ದೀಪಾವಳಿ ಪಾರ್ಟಿಯನ್ನು ತಮ್ಮ ಮನೆಯಲ್ಲಿ ಆಯೋಜಿಸಿದ್ದರು.