
ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಈ ವಿಶೇಷ ದಿನದಂದು ಅವರು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರಾಮ್ ಚರಣ್ ಅವರು ಪ್ರತಿ ವರ್ಷ ಬರ್ತ್ಡೇ ಸಂದರ್ಭದಲ್ಲಿ ತಿರುಪತಿಗೆ ಭೇಟಿ ನೀಡುತ್ತಾರೆ. ಈ ವರ್ಷವೂ ಸಂಪ್ರದಾಯ ಮುಂದುವರಿಸಿದ್ದಾರೆ. ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರಾಮ್ ಚರಣ್ ಅವರ ಜೊತೆ ಪತ್ನಿ ಉಪಾಸನಾ ಕೂಡ ಆಗಮಿಸಿದ್ದರು. ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆಯುತ್ತಿದೆ.

ರಾಮ್ ಚರಣ್ ಆಗಮಿಸುವ ವಿಚಾರ ತಿಳಿದು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಎಲ್ಲರೂ ರಾಮ್ ಚರಣ್ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

ರಾಮ್ ಚರಣ್ ಅವರು ಸದ್ಯ ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇತ್ತೀಚೆಗೆ ಬುಚ್ಚಿಬಾಬು ಜೊತೆಗಿನ ಸಿನಿಮಾದ ಪೂಜೆ ನಡೆದಿದೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ.