
ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರು 2022ರ ಏಪ್ರಿಲ್ 14ರಂದು ಹಸೆಮಣೆ ಏರಿದರು. ದಾಂಪತ್ಯ ಜೀವನದಲ್ಲಿ ಒಂದು ವರ್ಷ ಪೂರೈಸಿದ ಈ ಜೋಡಿ ಇತ್ತೀಚೆಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

ಮುದ್ದಿನ ಪತ್ನಿ ಆಲಿಯಾ ಭಟ್ಗಾಗಿ ರಣಬೀರ್ ಕಪೂರ್ ಅವರು ಏನು ಉಡುಗೊರೆ ನೀಡಿರಬಹುದು ಎಂದು ಅಭಿಮಾನಿಗಳು ತನಿಖೆ ನಡೆಸಿದ್ದಾರೆ. ಇತ್ತೀಚೆಗೆ ರಣಬೀರ್ ಕಪೂರ್ ಅವರು ಬ್ಯಾಗ್ವೊಂದನ್ನು ಹಿಡಿದು ಏರ್ಪೋರ್ಟ್ನಲ್ಲಿ ಕಾಣಿಸಿದ್ದರು.

ವೆಡ್ಡಿಂಗ್ ಆ್ಯನಿವರ್ಸರಿ ದಿನ ಅದೇ ಬ್ಯಾಗ್ ಆಲಿಯಾ ಭಟ್ ಹಿಡಿದುಕೊಂಡಿದ್ದರು. ಹಾಗಾಗಿ ರಣಬೀರ್ ಕಪೂರ್ ಅವರು ಪತ್ನಿಗೆ ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ.

ಆಲಿಯಾ ಭಟ್ ಹಿಡಿದುಕೊಂಡಿದ್ದ ಬ್ಯಾಗ್ನ ವಿಡಿಯೋ ವೈರಲ್ ಆಗಿದೆ. ಕೆಲವು ನೆಟ್ಟಿಗರು ಅದರ ಬ್ರ್ಯಾಂಡ್ ಯಾವುದು ಮತ್ತು ಬೆಲೆ ಎಷ್ಟು ಎಂಬುದನ್ನು ಕೂಡ ಪತ್ತೆ ಹಚ್ಚಿದ್ದಾರೆ. ಇದರ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ಸಿನಿಮಾಗಳ ಆಯ್ಕೆಯಲ್ಲಿ ರಣಬೀರ್ ಕಪೂರ್ ಅವರು ಚ್ಯೂಸಿ ಆಗಿದ್ದಾರೆ. ತಮಗೆ ಸೂಕ್ತ ಎನಿಸುವ ಸಿನಿಮಾಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಅವರ ಗಮನವೆಲ್ಲ ‘ಅನಿಮಲ್’ ಚಿತ್ರದ ಮೇಲಿದೆ. ಆ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಲಿದೆ.