
ನಟ ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಕೋಟಿ ಕೋಟಿ ರೂಪಾಯಿ ಬಾಚಿದೆ. ಇದರಿಂದ ರಣಬೀರ್ ಕಪೂರ್ ಅವರು ಗೆಲುವಿನ ನಗೆ ಬೀರಿದ್ದಾರೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ನಟಿಸಿದ್ದಾರೆ ಎಂಬ ಕಾರಣಕ್ಕೆ ‘ಬ್ರಹ್ಮಾಸ್ತ್ರ’ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇತ್ತು. ಈ ಕಾರಣದಿಂದಲೂ ಸಿನಿಮಾಗೆ ಮೈಲೇಜ್ ಸಿಕ್ಕಿದೆ.

ಸದ್ಯ ಆಲಿಯಾ ಭಟ್ ಪ್ರೆಗ್ನೆಂಟ್. ಇತ್ತೀಚೆಗೆ ಸೀಮಂತ ಶಾಸ್ತ್ರ ಕೂಡ ನೆರವೇರಿದೆ. ಪತ್ನಿಯ ಆರೈಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ರಣಬೀರ್.

ಈ ಕಾರಣಕ್ಕೆ ರಣಬೀರ್ ಕಪೂರ್ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಮಗು ಜನಿಸಿದ ಕೆಲ ಸಮಯದ ನಂತರದಲ್ಲಿ ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ.

ಸದ್ಯ ‘ಅನಿಮಲ್’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ.