Ranganatha Swamy Temple: ಪ್ರಕೃತಿಯ ಮಡಿಲಿನಲ್ಲಿ ಬೆಟ್ಟದ ಮೇಲೆ ನೆಲೆ ನಿಂತ ರಂಗನಾಥ ಸ್ವಾಮಿ

ಪ್ರಕೃತಿಯ ಸೊಬಗು ಹಾಗೂ ಸೌಂದರ್ಯವನ್ನು ಸವಿಯಬೇಕು ಎನ್ನುವ ಆಸೆ ಯಾರಿಗೆ ಇಲ್ಲ ಹೇಳಿ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಪ್ರವಾಸಿ ತಾಣದತ್ತ ಹೊರಟು ಬಿಡುವವರೇ ಹೆಚ್ಚು. ಒಂದು ವೇಳೆ ನಿಮಗೇನಾದರೂ ದೇವರ ದರ್ಶನ ಹಾಗೂ ಚಾರಣ ಒಂದೇ ಸ್ಥಳದಲ್ಲಿ ಆಗಬೇಕೆಂದರೆ ಹಾಸನ ಜಿಲ್ಲೆಯ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವುದೇ ಬೆಸ್ಟ್. ಹಾಗಾದ್ರೆ ಈ ಸ್ಥಳದ ವಿಶೇಷಯೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 21, 2024 | 5:10 PM

ಕೈ ಬೀಸಿ ಕರೆಯುತ್ತಿರುವ  ಪ್ರಕೃತಿ, ಸುತ್ತಲೂ ನೋಡಿದರೂ ಹರಿಯುತ್ತಿರುವ ಹೇಮಾವತಿ, ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುವ ತಾಣವೇ ಹಾಸನ ಜಿಲ್ಲೆಯ ರಂಗನಾಥ ಸ್ವಾಮಿ ದೇವಾಲಯ. ಈ ಬೆಟ್ಟವು ಕಲ್ಲು ಬಂಡೆಗಳಿಂದ ಆವೃತವಾಗಿದ್ದು, ಇಲ್ಲಿನ ಪ್ರಕೃತಿಯ ಸೌಂದರ್ಯವು ಮನಸ್ಸಿಗೆ ಹಿತವೆನಿಸದೇ ಇರದು.

1 / 5
ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಗ್ರಾಮದಲ್ಲಿರುವ ಈ ದೇವಾಲಯವು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡಿದೆ. ಹೇಮಾವತಿ ಅಣೆಕಟ್ಟಿನ ಹಿನ್ನಿರಿನಲ್ಲಿ ರಸ್ತೆಯ ಮಾರ್ಗವಿದ್ದು  ಇದರ ಮೂಲಕ ರಂಗನಾಥ ಸ್ವಾಮಿ ದೇವಾಲಯಕ್ಕೆ ತಲುಪಬಹುದು. ಇದೊಂದು ದ್ವೀಪದಂತೆ ಕಾಣಿಸುವುದು ಸಹಜ. ಇಲ್ಲಿ ಬಂದರೆ ಪ್ರಕೃತಿಯ  ಸೌಂದರ್ಯವು ನಿಮ್ಮನ್ನು ಸೆಳೆಯದೇ ಇರದು.

2 / 5
ದೇವರ ದರ್ಶನ ಪಡೆಯಬೇಕೇನ್ನುವವರಿಗೆ ಹಾಗೂ ಚಾರಣ ಪ್ರಿಯರಿಗೂ ಇದೊಂದು ಅದ್ಭುತ ತಾಣವೆನ್ನಬಹುದು. ಅದಲ್ಲದೇ, ಇನ್ನೊಂದು ವಿಶೇಷತೆಯೆಂದರೆ ಬಂಡೆಗಳು. ಬೆಟ್ಟದ ಮೇಲಿರುವ ಬೃಹತ್ ಆಕಾರದ ಬಂಡೆಗಳು ಯಾವುದೇ ನೆರವಿಲ್ಲದೆ ನಿಂತಿರುವುದು ಒಂದು ಕ್ಷಣ ಅಚ್ಚರಿಯೆನಿಸುತ್ತದೆ.

3 / 5
ಪ್ರಕೃತಿಯ ಮಡಿಲಿನಲ್ಲಿ ಬೆಟ್ಟದ ತುತ್ತ ತುದಿಯಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯ ದರ್ಶನ ಪಡೆಯಬೇಕೆನ್ನುವವರು ಹಾಸನದ ಹೊಳೆನರಸೀಪುರ ತಾಲೂಕಿನ ಹಳೆಕೋಟೆಗೆ ಭೇಟಿ ನೀಡಬಹುದು. ಪ್ರಕೃತಿ ರಮಣೀಯ ಸೌಂದರ್ಯದ ನಡುವೆ ಬೆಟ್ಟದ ರಂಗನಾಥ ಎಂದು ಕರೆಯಲ್ಪಡುವ  ಮಾವಿನಕೆರೆ ರಂಗನಾಥ ಸ್ವಾಮಿ ಇಲ್ಲಿ ನೆಲೆಸಿದ್ದಾನೆ.

4 / 5
 ಇದೊಂದು ಗುಹಾಲಯ ದೇವಾಲಯವಾಗಿದ್ದು, ರಂಗನಾಥ ಸ್ವಾಮಿ ಗರ್ಭಗುಡಿಯು ಬಂಡೆಗಳ ನಡುವೆ ಇದೆ. ಇಲ್ಲಿ ನಕ್ಷತ್ರಾಕಾರದ ವಾಸ್ತು ಶೈಲಿಯನ್ನು ಇಲ್ಲಿ ಕಾಣಬಹುದು. ಗರ್ಭಗುಡಿಯಲ್ಲಿ ರಂಗನಾಥ ಕಲ್ಲಿನ ಹಿಂದೆ ಮೂರು ಅಡಿ ಎತ್ತರದ ಭಗವಂತನ ವಿಗ್ರಹವಿದೆ. ಸುತ್ತಲೂ ಹರಿಯುತ್ತಿರುವ ಹೇಮಾವತಿ ನದಿಯ ನಡುವೆ, ಬೆಟ್ಟದ ತುದಿಯಿಂದ ನಿಂತು ಸುಂದರವಾದ ನೋಟವನ್ನು ಕಣ್ತುಂಬಿಸಿಕೊಳ್ಳಬಹುದು.

5 / 5
Follow us
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ

ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ

ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ

‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’

ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್

ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್