
ರಂಜನಿ ರಾಘವನ್ ಅವರು ತಮ್ಮ ಹುಡುಗನ ಜೊತೆ ಸುತ್ತಾಟ ನಡೆಸಿದ್ದಾರೆ. ಕಾರಿನಲ್ಲಿ ಅವರು ಜಾಲಿ ರೈಡ್ ಹೋಗಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಈ ಬಾರಿ ಮಳೆಗಾಲ ಮೊದಲೇ ಶುರುವಾಗಿದೆ. ಹೀಗಾಗಿ ನಿಸರ್ಗದಲ್ಲಿ ಹಸಿರು ರಾರಾಜಿಸುತ್ತಿದೆ. ಅಷ್ಟೇ ಅಲ್ಲ, ತುಂತುರು ಮಳೆಗೆ ವಾತಾವರಣ ಕೂಡ ಕೂಲ್ ಆಗಿದೆ. ಈ ಕಾರಣದಿಂದಲೇ ರಂಜನಿ ಅವರು ಈ ಸಂದರ್ಭದಲ್ಲಿ ಸುತ್ತಾಟ ನಡೆಸಲು ನಿರ್ಧರಿಸಿದ್ದರು.

ರಂಜನಿ ರಾಘವನ್ ಅವರು ಸಾಗರ್ ಭಾರಧ್ವಜ್ ಅವರನ್ನು ಮದುವೆ ಆಗುತ್ತಿದ್ದಾರೆ. ಅವರು ವೃತ್ತಿಯಲ್ಲಿ ಅಥ್ಲೆಟ್ ಎನ್ನಲಾಗಿದೆ. ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದಾರೆ. ರಂಜನಿ ಅವರಿಗೆ ನಿತ್ಯದ ಜಂಜಾಟದಿಂದ ಒಂದು ಸಣ್ಣ ಬ್ರೇಕ್ ಸಿಕ್ಕಂತೆ ಆಗಿದೆ.

ರಂಜನಿ ರಾಘವನ್ ಅವರು ಕಲರ್ಸ್ ಕನ್ನಡದ ‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ (ಭುವಿ) ಪಾತ್ರ ಮಾಡಿದ್ದರು. ಈ ಪಾತ್ರದ ಮೂಲಕ ಅವರು ಸಾಕಷ್ಟು ಗಮನ ಸೆಳೆದರು. ಈಗ ಅವರು ಸಿನಿಮಾ ಮಾಡುತ್ತಾ ಇದ್ದಾರೆ ಅನ್ನೋದು ವಿಶೇಷ.

ರಂಜನಿ ಅವರು ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಡಿ ಡಿ ಢಿಕ್ಕಿ’ ಎನ್ನುವ ಟೈಟಲ್ ಇಡಲಾಗಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ನಿರ್ದೇಶನದಲ್ಲಿ ಅವರಿಗೆ ಇದು ಮೊದಲ ಅನುಭವ. ಈ ಚಿತ್ರದ ರಿಲೀಸ್ಗಾಗಿ ಫ್ಯಾನ್ಸ್ ಕಾದಿದ್ದಾರೆ.

ರಂಜನಿ ರಾಘವನ್ ಅವರು ಬರಹಗಾರ್ತಿ ಕೂಡ ಹೌದು. ಅವರು ಕಥೆ ಪುಸ್ತಕಗಳನ್ನು ಬರೆದಿದ್ದಾರೆ. ‘ಡಿ ಡಿ ಢಿಕ್ಕಿ’ ಚಿತ್ರಕ್ಕೆ ಅವರದ್ದೇ ಕಥೆ ಇದೆ ಅನ್ನೋದು ವಿಶೇಷ. ಶೀಘ್ರವೇ ಈ ಚಿತ್ರ ಬಿಡುಗಡೆ ಕಾಣುವ ನಿರೀಕ್ಷೆ ಇದೆ.