Goodbye: ರಶ್ಮಿಕಾ ಹೊಸ ಚಿತ್ರದ ಟಿಕೆಟ್​ ಬೆಲೆ ಕೇವಲ 150 ರೂ.; ಸಿಹಿ ಸುದ್ದಿ ನೀಡಿದ ‘ಗುಡ್​ಬೈ’ ತಂಡ

| Updated By: ಮದನ್​ ಕುಮಾರ್​

Updated on: Oct 03, 2022 | 3:11 PM

Goodbye Ticket Price: ಕಡಿಮೆ ಬೆಲೆ ಇದ್ದರೆ ಮನೆ ಮಂದಿಯೆಲ್ಲ ಬಂದು ಸಿನಿಮಾ ನೋಡ್ತಾರೆ. ಹಾಗಾಗಿ ಕೇವಲ 150 ರೂಪಾಯಿಗೆ ಟಿಕೆಟ್​ ದರ ನಿಗದಿ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

1 / 5
ರಶ್ಮಿಕಾ ಮಂದಣ್ಣ, ಅಮಿತಾಭ್​ ಬಚ್ಚನ್​ ನಟನೆಯ ‘ಗುಡ್​ಬೈ’ ಸಿನಿಮಾ ಸಖತ್​ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ನೋಡಿ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ರಶ್ಮಿಕಾ ಪಾಲಿಗೆ ಈ ಚಿತ್ರ ತುಂಬ ವಿಶೇಷವಾಗಿದೆ.

2 / 5
ಅಕ್ಟೋಬರ್​ 7ರಂದು ‘ಗುಡ್​ಬೈ’ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ಕಾರಣಕ್ಕೆ ಟಿಕೆಟ್​ ಬೆಲೆಯನ್ನು ತಗ್ಗಿಸಿದೆ ಚಿತ್ರತಂಡ. ಈ ನ್ಯೂಸ್​ ಕೇಳಿ ಸಿನಿಪ್ರಿಯರಿಗೆ ಖುಷಿ ಆಗಿದೆ.

3 / 5
ಸಿನಿಮಾ ಟಿಕೆಟ್​ ಬೆಲೆ ದುಬಾರಿ ಆಗಿದ್ದರೆ ಚಿತ್ರಮಂದಿರಕ್ಕೆ ಬರಲು ಅನೇಕರು ಹಿಂದೇಟು ಹಾಕುತ್ತಾರೆ. ಕಡಿಮೆ ಬೆಲೆ ಇದ್ದರೆ ಮನೆ ಮಂದಿಯೆಲ್ಲ ಬಂದು ಸಿನಿಮಾ ನೋಡ್ತಾರೆ. ಹಾಗಾಗಿ ಕೇವಲ 150 ರೂಪಾಯಿಗೆ ಟಿಕೆಟ್​ ದರ ನಿಗದಿ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

4 / 5
ಇತ್ತೀಚೆಗೆ ‘ರಾಷ್ಟ್ರೀಯ ಸಿನಿಮಾ ದಿನ’ ಆಚರಿಸಲಾಗಿತ್ತು. ಆಗ ಎಲ್ಲ ಸಿನಿಮಾಗಳ ಟಿಕೆಟ್​ ಬೆಲೆ ಕೇವಲ 75 ರೂಪಾಯಿ ಮಾಡಲಾಗಿತ್ತು. ಅಂದು ಜನರು ಮುಗಿಬಿದ್ದು ಸಿನಿಮಾ ನೋಡಿದ್ದರು. ಅದೇ ತಂತ್ರವನ್ನು ಈಗ ‘ಗುಡ್​ಬೈ’ ಸಿನಿಮಾ ಬಳಸುತ್ತಿದೆ.

5 / 5
ಅಮಿತಾಭ್​ ಬಚ್ಚನ್​ ಜೊತೆ ನಟಿಸುವ ಅವಕಾಶ ಸಿಗುವುದು ಎಂದರೆ ಸಣ್ಣ ಮಾತಲ್ಲ. ಅಂಥ ಅವಕಾಶವನ್ನು ಪಡೆದುಕೊಂಡಿದ್ದು ರಶ್ಮಿಕಾ ಪಾಲಿನ ಹೆಮ್ಮೆಯ ಸಂಗತಿ. ಈ ಚಿತ್ರಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Published On - 3:11 pm, Mon, 3 October 22