ಮದುವೆಯ ಬಳಿಕ ತೆಲಂಗಾಣದ ಸಂಪ್ರದಾಯ ಅಪ್ಪಿಕೊಂಡ ರಶ್ಮಿಕಾ: ಬತುಕಮ್ಮ ಹಬ್ಬ ಆಚರಣೆ

Updated on: Oct 19, 2026 | 9:35 AM

ವಿಜಯ್ ದೇವರಕೊಂಡ ಜೊತೆ ವಿವಾಹವಾದ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರು ತೆಲಂಗಾಣದ ಸಾಂಪ್ರದಾಯಿಕ ಬತುಕಮ್ಮ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಟ್ಯಾಂಕ್ ಬಂಡ್‌ ನಡೆದ ಉತ್ಸವದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಹೆಜ್ಜೆ ಹಾಕಿರುವ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

1 / 5
ತೆಲಂಗಾಣದಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದ. ಸಾಂಪ್ರದಾಯಿಕ ಬತುಕಮ್ಮ ಹಬ್ಬವು ಈ ಉತ್ಸವದ ಪ್ರಮುಖ ಆಕರ್ಷಣೆ. ಬೇರೆ ಪ್ರದೇಶಗಳಿಂದ ಬಂದು ತೆಲಂಗಾಣದಲ್ಲಿ ನೆಲೆಸಿರುವ ಜನರು ಕೂಡ ಈ ಸಂಪ್ರದಾಯವನ್ನು ಅಪ್ಪಿಕೊಂಡು ಬಹಳ ಉತ್ಸಾಹದಿಂದ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.

ತೆಲಂಗಾಣದಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದ. ಸಾಂಪ್ರದಾಯಿಕ ಬತುಕಮ್ಮ ಹಬ್ಬವು ಈ ಉತ್ಸವದ ಪ್ರಮುಖ ಆಕರ್ಷಣೆ. ಬೇರೆ ಪ್ರದೇಶಗಳಿಂದ ಬಂದು ತೆಲಂಗಾಣದಲ್ಲಿ ನೆಲೆಸಿರುವ ಜನರು ಕೂಡ ಈ ಸಂಪ್ರದಾಯವನ್ನು ಅಪ್ಪಿಕೊಂಡು ಬಹಳ ಉತ್ಸಾಹದಿಂದ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.

2 / 5

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರನ್ನು ವಿವಾಹವಾದ ಬಳಿಕ, ಈಗ ತೆಲಂಗಾಣದ ಈ ಸಾಂಪ್ರದಾಯಿಕ ಸಂಭ್ರಮದ ಭಾಗವಾಗಿದ್ದಾರೆ. ಈ ವರ್ಷದ ಬತುಕಮ್ಮ ಹಬ್ಬದ ಆಚರಣೆಯಲ್ಲಿ ನಟಿ ಭಾಗವಹಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷವಾದ ಖುಷಿಯನ್ನು ನೀಡಿದ್ದಾರೆ.

3 / 5

ದಸರಾ ಹಬ್ಬದ ಮುನ್ನ ದಿನವಾದ ಭಾನುವಾರದಂದು ತೆಲಂಗಾಣ ಸರ್ಕಾರವು ಟ್ಯಾಂಕ್ ಬಂಡ್‌ ಪ್ರದೇಶದಲ್ಲಿ ಬತುಕಮ್ಮ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಜನಪ್ರಿಯ ಜೋಡಿಯಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ಆಹ್ವಾನಿಸಲಾಗಿತ್ತು.

4 / 5

ಸ್ಟೈಲಿಶ್ ಹಾಗೂ ಸುಂದರವಾದ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ನಟಿ ರಶ್ಮಿಕಾ ಎಲ್ಲರ ಗಮನ ಸೆಳೆದರು. ಅಲ್ಲಿ ಸೇರಿದ್ದ ಇತರ ಮಹಿಳೆಯರೊಂದಿಗೆ ಕೈಕೈ ಹಿಡಿದು ಬತುಕಮ್ಮ ಹಾಡುಗಳಿಗೆ ಹೆಜ್ಜೆ ಹಾಕಿದರು. ಇವರು ನೃತ್ಯ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

5 / 5

ತೆಲಂಗಾಣದ ಹೆಮ್ಮೆಯ ಸಾಂಪ್ರದಾಯಿಕ ಸಂಸ್ಕೃತಿಯನ್ನು ರಶ್ಮಿಕಾ ಮಂದಣ್ಣ ಪ್ರೀತಿಯಿಂದ ಸ್ವೀಕರಿಸಿ ಆಚರಿಸಿರುವುದು ಈಗ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯ ವಿಷಯವಾಗಿದೆ. ಈ ತಾರಾ ದಂಪತಿಯ ಒಡನಾಟ ಹಾಗೂ ಹಬ್ಬದ ಸಂಭ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us