
ರಶ್ಮಿಕಾ ಮಂದಣ್ಣ ಅವರಿಗೆ ಇಂದು (ಏಪ್ರಿಲ್ 5) ಜನ್ಮದಿನ. ಅವರು ಈಗ ನೇರವಾಗಿ ಒಮನ್ಗೆ ಹಾರಿದ್ದಾರೆ. ಅವರು ಪ್ರತಿ ವರ್ಷ ತಮ್ಮ ಜನ್ಮದಿನವನ್ನು ಬೇರೆ ಬೇರೆ ದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಒಮನ್ನ ಸಲಾಲಾಗೆ ರಶ್ಮಿಕಾ ಭೇಟಿ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸಲಾಲಾದ ಬೀಚ್ ಪಕ್ಕದಲ್ಲಿ ಕುಳಿತು ಅಲ್ಲಿಯ ತಿಂಡಿಗಳನ್ನು ಆಸ್ವಾದಿಸುತ್ತಾ ಇದ್ದಾರೆ. ರಶ್ಮಿಕಾ ಮಂದಣ್ಣ ಅವರ ಮುಖದಲ್ಲಿ ಸಂತೋಷ ಎದ್ದು ಕಾಣುತ್ತಿದೆ. ಆದರೆ, ಅವರು ಡಯಟ್ನ ಬ್ರೇಕ್ ಮಾಡಿದ್ದಕ್ಕೆ ಜಿಮ್ ಟ್ರೇನರ್ಗಳು ಸಿಟ್ಟಿಗೊಳಗಾಗುತ್ತಾರೆ ಎಂದಿದ್ದಾರೆ.

ರಶ್ಮಿಕಾರನ್ನು ಟ್ರೇನ್ ಮಾಡುವ ಜುನೈದ್ ಶೇಖ್ ಹಾಗೂ ಸಾಗರ್ ಅವರು ತಮ್ಮ ಬಗ್ಗೆ ಸಿಟ್ಟಾಗುತ್ತಾರೆ ಎಂದು ರಶ್ಮಿಕಾ ಕ್ಯಾಪ್ಶನ್ನಲ್ಲಿ ಹೇಳಿದ್ದಾರೆ. ಆದರೆ, ಬರ್ತ್ಡೇ ಆಗಿರುವುದರಿಂದ ರಶ್ಮಿಕಾ ಡಯಟ್ ಮರೆತು ತಮ್ಮಿಷ್ಟದ್ದನ್ನು ಸೇವನೆ ಮಾಡುತ್ತಾ ಇದ್ದಾರೆ.

ರಶ್ಮಿಕಾ ಮಂದಣ್ಣ ಅವರು ಆಗಮಿಸುತ್ತಿದ್ದಂತೆ ಕೇಕ್ ಮೂಲಕ ಅವರನ್ನು ಸ್ವಾಗತಿಸಲಾಗಿದೆ. ಒಮನ್ನಲ್ಲಿ ಅವರು ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ರಶ್ಮಿಕಾಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಬಂದಿದೆ.

ರಶ್ಮಿಕಾ ಮಂದಣ್ಣ ಅವರ ಜೊತೆ ವಿಜಯ್ ದೇವರಕೊಂಡ ಕೂಡ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದನ್ನು ರಶ್ಮಿಕಾ ರಿವೀಲ್ ಮಾಡಿಲ್ಲ. ‘ವಿಜಯ್ ದೇವರಕೊಂಡ ಎಲ್ಲಿ’ ಎಂದು ರಶ್ಮಿಕಾಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಾ ಇದ್ದಾರೆ.
Published On - 7:28 am, Sat, 5 April 25