ನಟಿ ರಶ್ಮಿಕಾ ಮಂದಣ್ಣ ಅವರು ಬಣ್ಣದ ಲೋಕದಲ್ಲಿ ವೇಗದಲ್ಲಿ ಮುನ್ನುಗ್ಗುತ್ತಿದ್ದಾರೆ. ನಾನಾ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಪ್ರೇಕ್ಷಕರಿಂದ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಇಂದು (ಏಪ್ರಿಲ್ 5) ಅವರ ಜನ್ಮದಿನ. ಈ ಪ್ರಯುಕ್ತ ಅವರ ಹೊಸ ಸಿನಿಮಾ ಒಂದು ಘೋಷಣೆ ಆಗಿದೆ.
ಈಗ ಹನು ರಾಘವಪುಡಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಭಿನ್ನ ಗೆಟಪ್ ತಾಳಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂನ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೋಷನ್ ಪೋಸ್ಟರ್ನಲ್ಲಿ ರಶ್ಮಿಕಾ ಆಫ್ರೀನ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಹಿಜಾಬ್ ಧರಿಸಿರುವ ಅವರು, ಕೈಯಲ್ಲಿ ಬ್ಯಾಗ್ ಹಿಡಿದ್ದಾರೆ. ಸುಡುತ್ತಿರುವ ಕಾರುಗಳ ಮಧ್ಯೆ ಅವರು ನಡೆದು ಹೋಗುತ್ತಿದ್ದಾರೆ. ಲಂಡನ್ನ ಖ್ಯಾತ ಬಿಗ್ ಬೇನ್ ಗಡಿಯಾರ ಕೂಡ ಪೋಸ್ಟರ್ನಲ್ಲಿದೆ. ಈ ಎಲ್ಲಾ ಕಾರಣಕ್ಕೆ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.