- Kannada News Photo gallery Rashmika Mandanna latest News Rashmika Mandanna In Kerala Entertainment News In Kannada
ಮಲಯಾಳಂ ಸಿನಿಮಾ ಮಾಡದಿದ್ದರೂ ಕೇರಳದಲ್ಲಿ ಹಿರಿದಾಗಿದೆ ರಶ್ಮಿಕಾ ಅಭಿಮಾನಿ ಬಳಗ
ರಶ್ಮಿಕಾ ಮಂದಣ್ಣ ಅವರು ಕೇರಳದ ಕರುಂಗಪಲ್ಲಿಗೆ ತೆರಳಿದ್ದರು. ಅಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಅವರನ್ನು ನೋಡಲು ಕಾದಿದ್ದರು. ರಶ್ಮಿಕಾ ಅವರು ಹಸಿರು ಬಣ್ಣದ ಸೀರೆ ಉಟ್ಟು ಮಿಂಚಿದ್ದಾರೆ.
Updated on: Jul 29, 2024 | 8:30 AM

ನಟಿ ರಶ್ಮಿಕಾ ಮಂದಣ್ಣ ಅವರು ಈವರೆಗೆ ಯಾವುದೇ ಮಲಯಾಳಂ ಸಿನಿಮಾ ಮಾಡಿಲ್ಲ. ಆದಾಗ್ಯೂ ಅಲ್ಲಿ ಅವರ ಅಭಿಮಾನಿ ಬಳಗ ತುಂಬಾನೇ ಹಿರಿದಾಗಿದೆ. ಇದಕ್ಕೆ ಹೊಸದಾದ ಸಾಕ್ಷಿ ಒಂದು ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ರಶ್ಮಿಕಾ ಮಂದಣ್ಣ ಅವರು ಕೇರಳದ ಕರುಂಗಪಲ್ಲಿಗೆ ತೆರಳಿದ್ದರು. ಅಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಅವರನ್ನು ನೋಡಲು ಕಾದಿದ್ದರು. ರಶ್ಮಿಕಾ ಅವರು ಹಸಿರು ಬಣ್ಣದ ಸೀರೆ ಉಟ್ಟು ಮಿಂಚಿದ್ದಾರೆ.

ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಕೇರಳದಲ್ಲಿ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲಕ್ಷಾಂತರ ಲೈಕ್ಸ್ಗಳು ಸಿಕ್ಕಿವೆ ಅನ್ನೋದು ವಿಶೇಷ.

ಕೇರಳದಲ್ಲಿ ತಮಗೆ ಅಷ್ಟೊಂದು ಅಭಿಮಾನಿಗಳು ಇದ್ದಾರೆ ಎಂಬುದನ್ನು ತಿಳಿದು ರಶ್ಮಿಕಾ ಮಂದಣ್ಣ ಅವರು ಸರ್ಪ್ರೈಸ್ ಆಗಿದ್ದಾರೆ. ‘ನಾನು ಇತ್ತೀಚೆಗೆ ಕೇರಳಕ್ಕೆ ತೆರಳಿದ್ದೆ. ಅದೊಂದು ಸುಸಜ್ಜಿತವಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮ. ಅಲ್ಲಿನ ಜನರು ನೋಡಿ ಖುಷಿಪಟ್ಟೆ’ ಎಂದಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಕೆಲವು ಸಿನಿಮಾಗಳು ಅವರ ಕೈಯಲ್ಲಿ ಇವೆ.



















